ಕೊರೋನಾ ಅಟ್ಟಹಾಸ: '20 ವರ್ಷ ಮೇಲ್ಪಟ್ಟ ರೋಗಿಗಳಿಗೆಲ್ಲ ಲಸಿಕೆ ನೀಡಿ'
ಸೋಂಕು ಹೆಚ್ಚಾದರೆ ಐಸಿಯು ವಾರ್ಡ್, ವೆಂಟಿಲೇಟರ್ ಕೊರತೆ ಉಂಟಾಗುವ ಸಾಧ್ಯತೆ| ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ ಆದ್ಯತೆ ಮೇರೆಗೆ ಕೊರೋನಾ ಲಸಿಕೆ ನೀಡುವುದು ಉತ್ತಮ| ಡಯಾಲಿಸಿಸ್ ರೋಗಿಗಳಿಗೆ ಲಸಿಕೆ ಅತ್ಯಗತ್ಯ|
ಬೆಂಗಳೂರು(ಏ.04): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದಾಗಿ ಏಕಾಏಕಿ ಸೋಂಕು ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ ಅಪಾಯ ಉಂಟಾಗುವ ಆತಂಕ ಹೆಚ್ಚಾಗಿದೆ. ಹೀಗಾಗಿ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ 20 ವರ್ಷ ಮೇಲ್ಪಟ್ಟ ಎಲ್ಲರಿಗೂ ಶೀಘ್ರವಾಗಿ ಕೊರೋನಾ ಲಸಿಕೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ, ನಿರ್ಲಕ್ಷಿಸಬೇಡಿ: ತಜ್ಞರು
ಟೈಪ್-2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಯುಳ್ಳ 20 ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ಹಾಕುವಂತೆ ತಜ್ಞರು ಸಲಹೆ ನೀಡಿದ್ದಾರೆ.