Asianet Suvarna News Asianet Suvarna News

ಬೆಂಗಳೂರಲ್ಲಿ ಬೆಡ್ ಸಿಗದೇ ಕೊರೋನಾ ಸೋಂಕಿತರ ಪರದಾಟ..!

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸೋಂಕಿತರು ಸರಿಯಾದ ಬೆಡ್ ಸಿಗದೇ ಕಂಗಾಲಾಗಿ ಹೋಗಿದ್ದಾರೆ. ಕೆಂಗೇರಿಯ 37 ವರ್ಷದ ವ್ಯಕ್ತಿಯೊಬ್ಬನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಈ ಕುರಿತಂತೆ ಆಸ್ಪತ್ರೆಗೆ ಕರೆ ಮಾಡಿದರೆ ಕರೆದುಕೊಂಡು ಹೋಗಲು ಯಾರೂ ಈ ಕಡೆ ಮುಖ ಹಾಕಿಲ್ಲ.

ಬೆಂಗಳೂರು(ಜೂ.04): ಉದ್ಯಾನನಗರಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದೆ. ಇದರ ಬೆನ್ನಲ್ಲೇ ಖಾಸಗಿ ಆಸ್ಪತ್ರೆಯೂ ಸೇರಿದಂತೆ ಸೋಂಕಿತರು ಬೆಡ್‌ಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಹೌದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸೋಂಕಿತರು ಸರಿಯಾದ ಬೆಡ್ ಸಿಗದೇ ಕಂಗಾಲಾಗಿ ಹೋಗಿದ್ದಾರೆ. ಕೆಂಗೇರಿಯ 37 ವರ್ಷದ ವ್ಯಕ್ತಿಯೊಬ್ಬನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಈ ಕುರಿತಂತೆ ಆಸ್ಪತ್ರೆಗೆ ಕರೆ ಮಾಡಿದರೆ ಕರೆದುಕೊಂಡು ಹೋಗಲು ಯಾರೂ ಈ ಕಡೆ ಮುಖ ಹಾಕಿಲ್ಲ. ಈಗ ಪಾಸಿಟಿವ್ ಬಂದಿದ್ದರೂ ಸಹ ಆ ವ್ಯಕ್ತಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. 

ಇಂದಿನಿಂದಲೇ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ..!

ಬೆಂಗಳೂರು ಪಾಸಿಟಿವ್ ಪ್ರಕರಣಗಳು ದಿನಂಪ್ರತಿ ಹೆಚ್ಚಾಗುತ್ತಿದ್ದರೂ ಸಹಾ, ಬೆಡ್‌ಗಳು ಸಿಗುತ್ತಿಲ್ಲ. ಸೋಂಕಿತ ವ್ಯಕ್ತಿ ಮನೆಯಲ್ಲೇ ಉಳಿದುಕೊಂಡಿದ್ದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.