ಹತ್ತಾರು ಕೃಷಿ ಅಧಿಕಾರಿಗಳ ಅಮಾನತು ಮಾಡಿದ ಸಚಿವ ಕೆ.ಎನ್. ರಾಜಣ್ಣ: ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರ!

ಕೃಷಿ ಮತ್ತು ಸಹಕಾರ ಇಲಾಖೆಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮಕ್ಕೆ ಬಾರದೇ ಕಳ್ಳಾಟವಾಡಿದ್ದ ಕೃಷಿ ಇಲಾಖೆ ಅಧಿಕಾರಿಗಳನ್ನು ಸಚಿವ ಕೆ.ಎನ್. ರಾಜಣ್ಣ ಅಮಾನತು ಮಾಡಿದ್ದಾರೆ.

First Published Aug 5, 2023, 5:24 PM IST | Last Updated Aug 5, 2023, 5:24 PM IST

ಹಾಸನ (ಆ.05): ರಾಜ್ಯ ಸರ್ಕಾರದ ಸಹಕಾರ ಇಲಾಖೆ ಮತ್ತು ಮತ್ತು ಕೃಷಿ ಇಲಾಖೆಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಬಾರದೇ ಕಳ್ಳಾಟ ಆಡಿದ ಕೃಷಿ ಅಧಿಕಾರಿಗಳನ್ನು ಬೆಂಡೆತ್ತಿದ ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ಗೃರಾದವರನ್ನು ಅಮಾನತು ಮಾಡುವಂತೆ ಆದೇಶಿಸಿದರು.

ಹಾಸನ ನಗರದ ಅಂಬೇಡ್ಕರ್ ಭವನದ ಮುಂಭಾಗ ಶನಿವಾರ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದ ವೇಳೆ ಕೆಳಹಂತದ ಅಧಿಕಾರಿಳು ಮಾತ್ರ ಹಾಜರಿದ್ದರು. ಆದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಪ್ರಮುಖ ಅಧಿಕಾರಿಗಳು ಸಹಕಾರಿ ಸಚಿವರ ಕಾರ್ಯಕ್ರಮಕ್ಕೆ ಹಾಜರಾಗಿರಿಲ್ಲ. ಇದರಿಂದ ಕೋಪಗೊಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ಕಾರ್ಯಕ್ರಮಕ್ಕೆ ಬಾರದ ಕೃಷಿ‌‌ ಇಲಾಖೆ ಅಧಿಕಾರಿಗಳ ಗರಂ ಆದರು.

ಈ ವೇಳೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ ಸಚಿವ ರಾಜಣ್ಣ, ಎಲ್ಲಿ ನಿಮ್ಮ ಇಲಾಖೆಯ ಡಿಡಿ, ಎಡಿ ಎಲ್ಲಾ ಎಲ್ಲಿ ಹೋದ್ರಯ್ಯಾ.? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿ ಎಲ್ಲರೂ ಮೀಟಿಂಗ್ ಗೆ ಹೋಗಿದ್ದಾರೆ ಅಂತಾ ಉತ್ತರಿಸಿದರು. ಇದಕ್ಕೆ ಸಿಟ್ಟಾದ ಸಚಿವರು, ಹೇಯ್ ಸುಳ್ಳು ಹೇಳ್ತೀಯಾ.. ಇವತ್ತು ರಜೆ ದಿನ ಯಾವನ್ ಮೀಟಿಂಗ್ ಮಾಡ್ತಾನೆ. ಯಾವನ್ ಸಹಾಯಕ ನಿರ್ದೇಶಕ ಅವನು..? ಯಾವ ಊರಿಂದ ಬರ್ತಾನೆ..? ಎಲ್ಲಿ ಹೋದ್ರು ಎಲ್ಲಾ.. ಹೇ ಯಾರ್ರಿ.. ಕೃಷಿ ಇಲಾಖೆ ಅಧಿಕಾರಿಗಳ ನೆಗ್ಲಜೆನ್ಸಿ ಅಂತಾ ಸಸ್ಪೆಷನ್ ಗೆ ಬರೀರಿ ಯಾವಾನಾದ್ರೂ ಆಗಲಿ ಎಂದರು.