ಸಿದ್ದರಾಮೋತ್ಸವ ಬಳಿಕ ಸಂಚಲನ, ಪಕ್ಷ ಅಧಿಕಾರಕ್ಕೆ ತರಲು 'ಕೈ' ಸಂಕಲ್ಪ

ಸಿದ್ದರಾಮೋತ್ಸವ ಸಮಾವೇಶದ ಬಳಿಕ ಕಾಂಗ್ರೆಸ್‌ನಲ್ಲಿ ಸಂಚಲನ ಉಂಟಾಗಿದೆ. ಸಮಾವೇಶದಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಈಗ ಇನ್ನಷ್ಟು ಚರ್ಚೆಯಾಗುತ್ತಿದೆ. ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶನವಾಗಿದ್ದು, ಕಾರ್ಯಕರ್ತರಿಗೆ ಪಾಸಿಟಿವ್ ಸಂದೇಶ ರವಾನೆಯಾಗಿದೆ. 

First Published Aug 4, 2022, 10:57 AM IST | Last Updated Aug 4, 2022, 10:57 AM IST

ದಾವಣಗೆರೆ (ಆ. 04): ಸಿದ್ದರಾಮೋತ್ಸವ (Siddaramothsava) ಸಮಾವೇಶದ ಬಳಿಕ ಕಾಂಗ್ರೆಸ್‌ನಲ್ಲಿ ಸಂಚಲನ ಉಂಟಾಗಿದೆ. ಸಮಾವೇಶದಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಈಗ ಇನ್ನಷ್ಟು ಚರ್ಚೆಯಾಗುತ್ತಿದೆ. ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶನವಾಗಿದ್ದು, ಕಾರ್ಯಕರ್ತರಿಗೆ ಪಾಸಿಟಿವ್ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಕಾಂಗ್ರೆಸ್‌ ಕೂಡಾ ಕಾರ್ಯೋನ್ಮುಖವಾಗಿದೆ. 

News Hour: ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಸಕ್ಸಸ್!

'ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ನನ್ನ ನಡುವೆ ಬಿರುಕಿದೆ ಎಂಬುದು ಇತರೆ ಪಕ್ಷಗಳ ಭ್ರಮೆ ಹಾಗೂ ಕೆಲ ಮಾಧ್ಯಮಗಳ ಸೃಷ್ಟಿ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಒಟ್ಟಾಗಿದ್ದೇವೆ. ರಾಜ್ಯದ ಭ್ರಷ್ಟ, ಕೋಮುವಾದಿ ಹಾಗೂ ಜನ ಪೀಡಕವಾಗಿರುವ ಬಿಜೆಪಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಲು ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಶ್ರಮಿಸುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 

Video Top Stories