News Hour: ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಸಕ್ಸಸ್‌!

ರಾಜ್ಯ ರಾಜಕೀಯದಲ್ಲಿ ಬಹಳ ಕುತೂಹಲ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಿದ್ದರಾಮೋತ್ಸವ ಕಾರ್ಯಕ್ರಮ ಬಹಳ ಸಾಂಗವಾಗಿ ನೆರವೇರಿತು. ಬೃಹತ್‌ ವೇದಿಕೆಯಲ್ಲಿ ಡಿಕೆ ಶಿವಕುಮಾರ್‌ ಹಾಗೂ ಸಿದ್ಧರಾಮಯ್ಯ ಪರಸ್ಪರ ಆಲಿಂಗನ ಮಾಡಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.3): ಭಾಗ್ಯಗಳ ಸರದಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75ನೇ ಜನ್ಮದಿನಕ್ಕಾಗಿ ನಡೆದ ಬೃಹತ್ ಸಿದ್ಧರಾಮೋತ್ಸವ ಸಮಾರಂಭ ದಾವಣಗೆರೆಯಲ್ಲಿ ಭರ್ಜರಿಯಾಗಿ ಮುಕ್ತಾಯ ಕಂಡಿದೆ. ಅದರೊಂದಿಗೆ ಸಿದ್ಧರಾಮಯ್ಯ ಅವರ ಶಕ್ತಿ ಪ್ರದರ್ಶನ ಯಶಸ್ವಿಯಾಗಿದೆ. ವೇದಿಕೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ 150ಕ್ಕೂ ಅಧಿಕ ಮಂದಿಗೆ ವ್ಯವಸ್ಥೆ ಮಾಡಲಾಗಿತ್ತು.

ಸಮಾರಂಭದಲ್ಲಿ ಕಡಿಮೆ ಎಂದರೂ ಸಿದ್ಧರಾಮಯ್ಯ ಅವರ ನಾಲ್ಕು ಲಕ್ಷ ಅಭಿಮಾನಿಗಳು ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಬೆಣ್ಣೆನಗರಿ ಗುರುವಾರ ಸಿದ್ಧರಾಮಯ್ಯ ಅವರ ಅಭಿಮಾನಿಗಳಿಂದಲೇ ತುಂಬಿಹೋಗಿತ್ತು. ಆರಂಭದಿಂದಲೂ ಸಿದ್ಧರಾಮೋತ್ಸವ ಎನ್ನುವ ಹೆಸರಿನಿಂದ ಗುರುತಿಸಿಕೊಂಡರೂ, ಸಿದ್ಧರಾಮಯ್ಯ ಮಾತ್ರ ಇದನ್ನು ಅಮೃತ ಮಹೋತ್ಸವ ಎಂದು ಕರೆದಿದ್ದರು. ಜನ ಮೆಚ್ಚಿದ ನಾಯಕನಿಗೆ ಕಂಬಳಿ ಸೇರಿದಂತೆ ವಿವಿಧ ಗಿಫ್ಟ್‌ಗಳನ್ನು ನೀಡಿದ್ದಾರೆ.

Siddaramotsava: ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ: ಸಿ.ಟಿ.ರವಿ ಪ್ರಶ್ನೆ

ಸಿದ್ಧರಾಮಯ್ಯ ಅವರ ಶಕ್ತಿ ಪ್ರದರ್ಶನ ಎಂದು ಗುರುತಿಸಿಕೊಂಡ ವೇದಿಕೆಯಲ್ಲಿಯೇ, ಸಿಎಂ ಕುರ್ಚಿಗಾಗಿ ಫೈಟ್‌ ಮಾಡುತ್ತಿರುವ ಡಿಕೆ ಶಿವಕುಮಾರ್‌ ಅವರನ್ನು ಆಲಂಗಿಸಿಕೊಂಡರು. ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಸೇರಿ ಬಿಜೆಪಿ ಸರ್ಕಾರದ ವಿರುದ್ಧ ಮಾಹಿತ ಪ್ರಹಾರ ನಡೆಸಿದರು.

Related Video