Free Hindu Temples: ಆರೆಸ್ಸೆಸ್‌ ಕೈಗೆ ನೀಡಲು ಸರ್ಕಾರದ ಹುನ್ನಾರ, ನಾವು ಸುಮ್ಮನಿರಲ್ಲ: ಡಿಕೆಶಿ

ದೇವಾಲಯಗಳನ್ನು ಸ್ವತಂತ್ರಗೊಳಿಸಲು (Free Hindu Temples) ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್‌ (Congress) ತೀವ್ರ ವಿರೋಧ ವ್ಯಕ್ತಪಡಿಸಿದೆ. 

First Published Dec 31, 2021, 10:27 AM IST | Last Updated Dec 31, 2021, 10:36 AM IST

ಬೆಂಗಳೂರು (ಡಿ. 31): ದೇವಾಲಯಗಳನ್ನು ಸ್ವತಂತ್ರಗೊಳಿಸಲು (Free Hindu Temples) ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್‌ (Congress) ತೀವ್ರ ವಿರೋಧ ವ್ಯಕ್ತಪಡಿಸಿದೆ.  ಇದು ದೇವಾಲಯಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಹಾಗೂ ಅವುಗಳ ಉಸ್ತುವಾರಿಯನ್ನು ಆರ್‌ಎಸ್‌ಎಸ್‌ಗೆ (RSS)ವಹಿಸಿಕೊಡಲು ನಡೆಸಿರುವ ಷಡ್ಯಂತ್ರ ಎಂದು ಆರೋಪಿಸಿದೆ.

Free Hindu Temples: ದೇಗುಲಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲು ನಾವು ಬಿಡಲ್ಲ: ಡಿಕೆಶಿ

ರಾಜ್ಯ ಬಿಜೆಪಿ ಸರ್ಕಾರವು ಈಗಾಗಲೇ ಸಾವಿರಾರು ಕೋಟಿ ರು.ಗಳ ಆಸ್ತಿಯನ್ನು ಆರ್‌ಎಸ್‌ಎಸ್‌ (RSS) ಹಿನ್ನೆಲೆಯ ಸಂಸ್ಥೆಗಳಿಗೆ ಮಾಡಿಕೊಟ್ಟಿದೆ. ಇತ್ತೀಚೆಗಷ್ಟೇ ಚಾಣಕ್ಯ ವಿಶ್ವವಿದ್ಯಾಲಯದ ನೆಪದಲ್ಲಿ ನೂರಾರು ಕೋಟಿ ರು. ಬೆಲೆಬಾಳುವ ಜಮೀನನ್ನು ಕಡಿಮೆ ಬೆಲೆಗೆ ಸರ್ಕಾರ ಮಾರಾಟ ಮಾಡಿದೆ. ಇದೀಗ ರಾಜ್ಯದ ದೇವಾಲಯಗಳನ್ನೇ ಆರ್‌ಎಸ್‌ಎಸ್‌ನವರಿಗೆ ವಹಿಸಿ ಅದನ್ನು ಹಿಂದುತ್ವ ಎಂದರೆ ಹಿಂದೂಗಳಾದ ನಾವು ಸುಮ್ಮನಿರುವುದಿಲ್ಲ. ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಡಿಕೆಶಿ (DK Shivakumar) ಎಚ್ಚರಿಸಿದ್ದಾರೆ.

 

Video Top Stories