'ಗೋಮೂತ್ರ ಕುಡಿಯುವವರ ಬುದ್ದಿ ಹತ್ಯೆಯಾಗಿದೆ ಎಂದಿದ್ದ ಸಾವರ್ಕರ್!'
ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು. ಬೇರೆಯರು ತಿನ್ನೋದಕ್ಕೂ ಅವರು ಬೇಸರ ಪಟ್ಟುಕೊಂಡಿರಲಿಲ್ಲ. ಯಾವುದೇ ಆಕ್ಷೇಪ ಮಾಡುತ್ತಿರಲಿಲ್ಲ. ಗೋವು ಎತ್ತಿಗೆ ಮಾತ್ರ ತಾಯಿ ಹಿಂದುಗಳಿಗಲ್ಲ ಎನ್ನುವುದು ಅವರ ಮಾತಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಆ. 25): ಸಾವರ್ಕರ್ ಹಿಂದುತ್ವದ ಪಿತಾಮಹ ಎಂದು ಆರ್‌ಎಸ್ಎಸ್ ಹಾಗೂ ಬಿಜೆಪಿಯವರು ಹೇಳ್ತಾರೆ. ಆದರೆ, ನಾನು ಹೇಳಿದ ಹಾಗೆ ಅವರು ವಿಚಾರವಾದಿಗಳು, ನಾಸ್ತಿಕರು ಆಗಿದ್ದರು. ಆದರೆ, ಅಚ್ಚರಿಯೆಂದರೆ, ಅವರು ಎಂದಿಗೂ ಗೋವನ್ನು ಮಾತೆ ಎಂದು ಪೂಜೆ ಮಾಡುತ್ತಿರಲಿಲ್ಲ. ಗೋವು ಪವಿತ್ರವಲ್ಲ ಎಂದು ಅವರು ನಂಬಿದ್ದರು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗೋವು ಒಂದು ಉಪಯುಕ್ತವಾದ ಪ್ರಾಣಿ ಎಂದಷ್ಟೇ ಅವರು ಹೇಳಿದ್ದರು. ಗೋವು ಯಾರಿಗಾದರೂ ತಾಯಿ ಆಗಿದ್ದರೆ ಅದು ಎತ್ತಿಗೆ ಮಾತ್ರ. ಹಿಂದುಗಳಿಗಲ್ಲ ಎಂದು ಅವರು ಬರೆದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಿಂದುಗಳ ಗೋಮಾತೆಯನ್ನು ಪೂಜೆ ಮಾಡೋದನ್ನು ಬಿಟ್ಟು, ಸೂಪರ್ ಹ್ಯೂಮನ್ ಕ್ವಾಲಿಟಿ ಇರುವವರನ್ನು ಪೂಜೆ ಮಾಡಿ ಎಂದು ಸಾವರ್ಕರ್ ಹೇಳಿದ್ದರು.
ಸಾವರ್ಕರ್ ಅಂದ್ರೆ, ತತ್ವ, ತರ್ಕ, ತ್ಯಾಗದ ರೂಪ.. ಅಟಲ್ ಹೇಳಿದ್ದ ಮಾತುಗಳಲ್ಲಿತ್ತು ಮಹಾನ್ ನಾಯಕನ ನೋವು!
ಆದರೆ, ಈಗಿನ ಸರ್ಕಾರ ಕರೋನಾ ಬಂದಾಗ ಗೋಮೂತ್ರ ಕುಡಿಯಿರಿ ಅಂದ್ರು, ಸಗಣಿ ಬಳಸಿ ಅಂದ್ರು. ಆದರೆ, ಗೋಮೂತ್ರ ಕುಡಿಯುವವರ ಬುದ್ಧಿ ಹತ್ಯೆಯಾಗಿದೆ ಎಂದು ಸಾವರ್ಕರ್ ಅವರೇ ಬರೆದುಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.