Mekedatu Project: ಜನರ ಗಮನ ಸೆಳೆಯಲು ಕಾಂಗ್ರೆಸ್‌ನ ಗಿಮಿಕ್: ಬಿ ಸಿ ಪಾಟೀಲ್

ಮೇಕೆದಾಟು ಯೋಜನೆಗೆ (Mekedatu Project) ಆಗ್ರಹಿಸಿ, ಕಾಂಗ್ರೆಸ್‌ನವರು 3 ದಿನ ವಿಧಾನಸಭೆಯಲ್ಲೇ ಮಲಗಿದ್ದರು. ಯಾವ ಪುರುಷಾರ್ಥಕ್ಕೆ ಕಲಾಪವನ್ನು ಹಾಳು ಮಾಡಿದರೋ ಗೊತ್ತಿಲ್ಲ. ರಾಜ್ಯದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸಿಲ್ಲ. ಕಾಂಗ್ರೆಸ್ ಅಂದ್ರೆ ಜನ ತಿರಸ್ಕಾರ ಭಾವದಿಂದ ನೋಡುತ್ತಿದ್ದಾರೆ: BC Patil 

First Published Mar 1, 2022, 10:22 AM IST | Last Updated Mar 1, 2022, 10:22 AM IST

ಬೆಂಗಳೂರು (ಮಾ. 01): ಮೇಕೆದಾಟು ಯೋಜನೆಗೆ ಆಗ್ರಹಿಸಿ, ಕಾಂಗ್ರೆಸ್‌ನವರು 3 ದಿನ ವಿಧಾನಸಭೆಯಲ್ಲೇ ಮಲಗಿದ್ದರು. ಯಾವ ಪುರುಷಾರ್ಥಕ್ಕೆ ಕಲಾಪವನ್ನು ಹಾಳು ಮಾಡಿದರೋ ಗೊತ್ತಿಲ್ಲ. ರಾಜ್ಯದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸಿಲ್ಲ. ಕಾಂಗ್ರೆಸ್ ಅಂದ್ರೆ ಜನ ತಿರಸ್ಕಾರ ಭಾವದಿಂದ ನೋಡುತ್ತಿದ್ದಾರೆ. ಜನರ ಗಮನ ಸೆಳೆಯಲು ಮೇಕೆದಾಟು 2.0 ಶುರು ಂಅಡಿದ್ಧಾರೆ. ಮೇಕೆದಾಟು ಯೋಜನೆಗೆ ಬಿಜೆಪಿಯ ವಿರೋಧ ಇಲ್ಲ. ನಾವೂ ಕೂಡಾ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಅಪ್ರೂವಲ್ ಬಂದ ಕೂಡಲೇ ಶುರು ಮಾಡುತ್ತೇವೆ. ಕಾಂಗ್ರೆಸ್ ಸತ್ತೋಗಿದೆ. ನಾವು ಇದ್ದೇವೆ ಎಂದು ತೋರಿಸಿಕೊಳ್ಳೋಕೆ ಮೇಕೆದಾಟು ಗಿಮಿಕ್ ಮಾಡುತ್ತಿದ್ದಾರೆ ಎಂದು ಬಿ ಸಿ ಪಾಟೀಲ್ ವಾಗ್ದಾಳಿ ನಡೆಸಿದರು.