Hijab Row: ಮುತಾಲಿಕ್ ಸಿಂಧೂರ ಹೇಳಿಕೆಗೆ ಖಾದರ್ ಗರಂ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ

ಹಿಜಾಬ್‌ (Hijab) ವಿಷಯದ ಜೊತೆಗೆ ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಯಾರಾದರೂ ಮಾತನಾಡಿದರೆ ನಾಲಿಗೆ ಸೀಳಬೇಕಾದಿತು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ (Pramod Muthalik) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

First Published Feb 20, 2022, 4:21 PM IST | Last Updated Feb 20, 2022, 4:34 PM IST

ಬೆಂಗಳೂರು (ಫೆ. 20): ಹಿಜಾಬ್‌ (Hijab) ವಿಷಯದ ಜೊತೆಗೆ ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಯಾರಾದರೂ ಮಾತನಾಡಿದರೆ ನಾಲಿಗೆ ಸೀಳಬೇಕಾದಿತು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ (Pramod Muthalik) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Karnataka Congress: ಹೈಕಮಾಂಡ್ ಬುಲಾವ್, ದೆಹಲಿ ಭೇಟಿ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ

ಈ ಹೇಳಿಕೆಗೆ ಯು ಟಿ ಖಾದರ್ ಗರಂ ಆಗಿದ್ದಾರೆ.  ಇಂಥ ಹೇಳಿಕೆ ಕೊಟ್ಟು ಸಮಾಜದ ಆತಂಕ ಹೆಚ್ಚಿಸಬಾರದು. ಸಾಮಾನ್ಯ ಜನರು ಟೆನ್ಷನ್‌ನಿಂದ ಬದುಕುವಂತಾಗಿದೆ. ಪರಸ್ಪರ ಧರ್ಮಗಳಿಗೆ ಗೌರವ ಕೊಟ್ಟು ಸೌಹಾರ್ದತೆಯಿಂದ ಬದುಕಬೇಕು. ರಾಜ್ಯ ಸರ್ಕಾರ ಮುತಾಲಿಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯು ಟಿ ಖಾದರ್ ಆಗ್ರಹಿಸಿದ್ದಾರೆ.