News Hour: ದಳಕೋಟೆಯಲ್ಲಿ ಕಾಂಗ್ರೆಸ್​ ಘರ್ಜನೆ ನಡುವೆ ಮಧ್ಯೆ ‘ಒಪ್ಪಂದ’ದ ಫೈಟ್

ದೇವೇಗೌಡರ ತವರಲ್ಲಿ ಕಾಂಗ್ರೆಸ್ ನಾಯಕರು ಜನಕಲ್ಯಾಣ ಸಮಾವೇಶದಲ್ಲಿ ಅಬ್ಬರಿಸಿದ್ದಾರೆ. ಸಮಾವೇಶದಲ್ಲಿ ಹಳೇ ಮೈಸೂರು ಕಬ್ಜಾಗೆ ಕಹಳೆ ಊದಿದ್ದಾರೆ ಜೊತೆಗೆ ಜೆಡಿಎಸ್​ ಟಾರ್ಗೆಟ್ ಮಾಡಿ ಸಿಎಂ, ಡಿಸಿಎಂ ಸಿಡಿಗುಂಡಿನ ಭಾಷಣ ಮಾಡಿದ್ದಾರೆ. ಬಿಜೆಪಿಯಲ್ಲಿ ಬಣ ಬಡಿದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

First Published Dec 5, 2024, 11:07 PM IST | Last Updated Dec 5, 2024, 11:09 PM IST

ಬೆಂಗಳೂರು (ಡಿ.5): ದೇವೇಗೌಡರ ತವರಲ್ಲಿ ಕಾಂಗ್ರೆಸ್​ ನಾಯಕರು ಅಬ್ಬರಿಸಿದ್ದಾರೆ. ಜನಕಲ್ಯಾಣ ಸಮಾವೇಶದಲ್ಲಿ ಹಳೇ ಮೈಸೂರು ಕಬ್ಜಾಗೆ ಕಹಳೆ ಊದಿದ್ದಾರೆ. ಜೆಡಿಎಸ್​ ಟಾರ್ಗೆಟ್ ಮಾಡಿ ಸಿಎಂ,ಡಿಸಿಎಂ ಸಿಡಿಗುಂಡಿನ ಭಾಷಣ ಮಾಡಿದ್ದಾರೆ.

ಸಮಾವೇಶ ಸಂಭ್ರಮದ ಮಧ್ಯೆ ಅಧಿಕಾರ ಹಂಚಿಕೆ ಫೈಟ್ ಶುರುವಾಗಿದೆ. ಡಿಕೆಶಿ ಹೇಳಿಕೆಗೆ  ಸಚಿವ ಪರಮೇಶ್ವರ್ ರೊಚ್ಚಿಗೆದ್ದಿದ್ದಾರೆ. ಹೈಕಮಾಂಡೇ ಅಂತಿಮ ಎಂದ ಸಿಎಂ, ಮಾತಾಡಿದ್ದು ನಿಜ ಎಂದು ಡಿಸಿಎಂ ಹೇಳಿದ್ದಾರೆ.

3 ಕೋಟಿ ಎಫ್‌ಡಿ ಹಣ ಕದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ, ಆರ್‌ಬಿಐಗೆ ನೋಟಿಸ್‌ ಕಳಿಸಿದ ಕೋರ್ಟ್‌!

ಇನ್ನೊಂದೆಡೆ, ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹೈಕಮಾಂಡ್ ಬುದ್ಧಿಮಾತಿನ ಬಳಿಕ ಯತ್ನಾಳ್​ ಸೈಲೆಂಟ್​ ಆಗಿದ್ದಾರೆ. ಎಲ್ಲ ಬಗೆಹರಿಯುತ್ತೆ ಎಂದು ಬಿಎಸ್‌ವೈ ಹೇಳಿದ್ದರೆ, ದಿಲ್ಲಿಗೆ ಹೋಗ್ತೀವಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 

Video Top Stories