Asianet Suvarna News Asianet Suvarna News

ಜಾತಿಗಣತಿ ವರದಿ ಬಿಡುಗಡೆಗೆ ಕಾಂಗ್ರೆಸ್‌ನಲ್ಲೇ ವಿರೋಧ: ಬಹುಸಂಖ್ಯಾತರಾದ ಮುಸ್ಲಿಮರು

ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ತಮ್ಮ ಕನಸಿನ ಕೂಸಾದ ಜಾತಿ ಗಣತಿ ವರದಿ ಬಿಡುಗಡೆಗೆ ಮುಂದಾಗಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧ ವ್ಯಕ್ತವಾಗುತ್ತಿದೆ.

First Published Jun 26, 2023, 11:15 PM IST | Last Updated Jun 26, 2023, 11:15 PM IST

ಬೆಂಗಳೂರು (ಜೂ.26): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಜಾತಿಗಣತಿಯ ವರದಿಯನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬದ ಕೂಡಲೇ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ನಾವೇ ಪ್ರಬಲರು ಎಂದು ಹೇಳಿಕೊಳ್ಳುತ್ತಿರುವ ಸಮುದಾಯಗಳ ನಾಯಕರು ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಅಲ್ಪಸಂಖ್ಯಾತರಾಗಿದ್ದ ಮುಸ್ಲಿಮರು ಈಗ ಬಹುಸಂಖ್ಯಾತರಾಗಿದ್ದಾರೆ ಎಂಬ ಅಂಶವೂ ಕಂಡುಬರುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ  ಜಾತಿ ಗಣತಿ ವರದಿ ಸ್ವೀಕಾರ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಆದರೆ, ಜಾತಿ ಗಣತಿ ಬಿಡುಗಡೆಗೆ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರ ಕೇಳಿಬಂದಿದೆ. ಇದರ ನಡುವೆಯೂ ಸಿಎಂ ಸಿದ್ದರಾಮಯ್ಯ  ಜಾತಿ ಗಣತಿ ಬಿಡುಗಡೆಗೆ ಮುಂದಾಗಿದ್ದಾರೆ. ಇದಕ್ಕೆ ಪ್ರಬಲ ಸಮುದಾಯದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲಿಂಗಾಯತ ಸಮುದಾಯದ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ದೇವೇಗೌಡರನ್ನು ಭೇಟಿಯಾಗಿದ್ದಾರೆ. ಈ ವೇಳೆ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಆಗುವ ಲಾಭ ನಷ್ಟದ ಚರ್ಚೆ ಮಾಡಿದ್ದಾರೆ. 

ಕೆಂಪೇಗೌಡ ಪ್ರಶಸ್ತಿಗೆ ಜಯದೇವ ಆಸ್ಪತ್ರೆ, ನಿತಿನ್‌ ಕಾಮತ್‌, ಅದಿತಿ ಅಶೋಕ್‌ ಆಯ್ಕೆ: 5 ಲಕ್ಷ ರೂ. ನಗದು ಘೋಷಣೆ

ಏನಿದು ಜಾತಿ ಗಣತಿ?:  2015ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಡೆದಿದ್ದ ಜಾತಿ ಗಣತಿಯನ್ನು ಆರಂಭಿಸಲಾಗಿತ್ತು. ಈ ಗಣತಿ ಕಾರ್ಯವು 2016ರಲ್ಲಿ ಜಾತಿ ಸಮೀಕ್ಷೆ ಮುಕ್ತಾಯವಾಗಿತ್ತು. ಇನ್ನು 2018ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು. ಸುಮಾರು 158 ಕೋಟಿ ರೂಪಾಯಿ ವೆಚ್ಚದಲ್ಲಿ ವರದಿ ಸಿದ್ದಪಡಿಸಲಾಗಿತ್ತು. ಯಾವ ಜಾತಿ, ಯಾವ ಧರ್ಮ, ಯಾವ ಸಮುದಾಯದ ಎಷ್ಟು ಜನರಿದ್ದಾರೆ. ಯಾವ ಪಂಗಡ, ಯಾವ ಉಪಜಾತಿ ಎಷ್ಟು ಜನ ಇದ್ದಾರೆ ಅನ್ನೋ ಉಲ್ಲೇಖ ಮಾಡಲಾಗಿತ್ತು. 

ವರದಿ ಬಹಿರಂಗಕ್ಕೆ ಹಿಂದೇಟು ಹಾಕಲು ಕಾರಣ:  ಜಾತಿ ಗಣತಿ ವರದಿ ಬಹಿರಂಗ ಮಾಡಿದ್ರೆ ರಾಜಕೀಯವಾಗಿ ಹಿನ್ನಡೆ ಆಗಲಿದೆ ಎಂದು ಕೇಳಿಬರುತ್ತಿದೆ. ವರದಿ ಬಹಿರಂಗವಾದರೆ ಜಾತಿ ಸಮೀಕರಣ ಲೆಕ್ಕಾಚಾರವೇ ಬುಡಮೇಲು! ಆಗಲಿದೆ. ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆ ಎಂಬ ವರದಿ ಬಂದಿದೆಯಂತೆ. ವರದಿ ಬಹಿರಂಗ ಮಾಡಿದ್ರೆ ರಾಜಕೀಯವಾಗಿ ಕಾಂಗ್ರೆಸ್ಗೆ ಹಿನ್ನಡೆ ಆತಂಕ ಎದುರಾಗಿದೆ. ಜಾತಿ ಗಣತಿ ವರದಿ ಪ್ರಕಾರ  ಅಹಿಂದ ಸಮುದಾಯವೇ ಹೆಚ್ಚಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತರೇ ರಾಜ್ಯದಲ್ಲಿ ಬಹುಸಂಖ್ಯಾತರು ಆಗಿದ್ದಾರೆ. ವರದಿ ಪ್ರಕಾರ ಮೊದಲ ಸ್ಥಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯ, ಎರಡನೇ ಸ್ಥಾನದಲ್ಲಿ ಅಲ್ಪಸಂಖ್ಯಾತರು ಸಮುದಾಯ, ಮೂರನೇ ಸ್ಥಾನದಲ್ಲಿ ಹಿಂದುಳಿದ ಸಮುದಾಯ, ಪ್ರಬಲ ಸಮುದಾಯವಾದ ಲಿಂಗಾಯತರಿಗೆ ವರದಿಯಲ್ಲಿ 4ನೇ ಸ್ಥಾನ ಹಾಗೂ ಒಕ್ಕಲಿಗರಿಗೆ ವರದಿಯಲ್ಲಿ 5ನೇ ಸ್ಥಾನ ಲಭ್ಯವಾಗಿದೆ. 

  • ಜಾತಿ ಗಣತಿಯಲ್ಲಿ ಸಮುದಾಯಗಳ ಬಲಾಬಲ
  • ಮೊದಲ ಸ್ಥಾನ - ಎಸ್‌ಸಿ, ಎಸ್‌ಟಿ
  • ಎರಡನೇ ಸ್ಥಾನ - ಅಲ್ಪಸಂಖ್ಯಾತರು
  • ಮೂರನೇ ಸ್ಥಾನ - ಒಬಿಸಿ
  • ನಾಲ್ಕನೇ ಸ್ಥಾನ - ಲಿಂಗಾಯತರು
  • ಐದನೇ ಸ್ಥಾನ - ಒಕ್ಕಲಿಗರು

Video Top Stories