Asianet Suvarna News Asianet Suvarna News

News Hour: ಕಾಂಗ್ರೆಸ್‌ ಗ್ಯಾರಂಟಿಗೆ ದಿನಕ್ಕೆ ಒಂದೊಂದು ನಿಯಮ!

ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿರುವ ಪಂಚ ಗ್ಯಾರಂಟಿಗೆ ದಿನಕ್ಕೊಂದು ನಿಯಮಗಳು ಸರ್ಕಾರ ಸೇರಿಸುತ್ತಿದೆ. ಇದು ಜನರಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಗೃಹಜ್ಯೋತಿ ವಿಚಾರದ ಗೊಂದಲದ ಬಳಿಕ ಈಗ ಗೃಹಲಕ್ಷ್ಮೀಯಲ್ಲೂ ಹೊಸ ನಿಯಮವನ್ನು ಸರ್ಕಾರ ಘೋಷಣೆ ಮಾಡಿದೆ.
 

ಬೆಂಗಳೂರು (ಜೂ. 8): ಗೃಹಜ್ಯೋತಿ ಬಳಿಕ ಗೃಹಲಕ್ಷ್ಮಿ ಯೋಜನೆಗೂ ದಿನಬೆಳಗಾದರೆ ಒಂದೊಂದು ನಿಯಮವನ್ನು ಸರ್ಕಾರ ಸೇರಿಸುತ್ತಿದೆ. ಹೊಸ ನಿಯಮದ ಪ್ರಕಾರ, ಮಕ್ಕಳು ತೆರಿಗೆ ಪಾವತಿಸುತ್ತಿದ್ದರೆ ಅಂಥ ತಾಯಂದಿರರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಸಿಗೋದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ನಡೆದ ಸಭೆಯ ಬಳಿಕ ಹೇಳಿದ್ದಾರೆ.

ಇಲ್ಲಿಯವರೆಗೂ ಪತಿ ಐಟಿ ಅಥವಾ ಜಿಎಸ್‌ಟಿ ತೆರಿಗೆ ಕಟ್ಟುತ್ತಿದ್ದರೆ ಅಂಥವರಿಗೆ 2 ಸಾವಿರ ರೂಪಾಯಿ ಸಿಗೋದಿಲ್ಲ ಎಂದು ತಿಳಿಸಲಾಗಿತ್ತು. ಆದರೆ, ಗುರುವಾರ ಹೊಸ ನಿಯಮವನ್ನು ಸೇರಿಸಲಾಗಿದ್ದು, ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ ಅವರಿಗೆ ಗೃಹಲಕ್ಷ್ಮೀಯ 2 ಸಾವಿರ ರೂಪಾಯಿ ಬರೋದಿಲ್ಲ ಎಂದು ಹೇಳಲಾಗಿದೆ.

ಗೋಳ್ವಾಳ್ಕರ್‌, ಸಾವರ್ಕರ್‌ ಫೇಕ್‌ ದೇಶಭಕ್ತರು, ಅವರ ಪಾಠ ನಮಗ್ಯಾಕೆ: ಕುಂವೀ!

ಇದರ ನಡುವೆ, ರಾಜ್ಯದಿಂದ ಏಕೈಕ ಕಾಂಗ್ರೆಸ್‌ ಸಂಸದರಾಗಿರುವ ಡಿಕೆ ಸುರೇಶ್‌ ರಾಜಕೀಯ ವೈರಾಗ್ಯದ ಮಾತನಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ವಾ ಅನ್ನೋ ಅನುಮಾನ ಕಾಡಿದೆ. ಅದಕ್ಕೆ ಕಾರಣ ಅವರು ಇಂದು ಆಡಿರುವ ಮಾತಿಗಳು!