MLC Election Results: ಬಿಜೆಪಿ-ಕಾಂಗ್ರೆಸ್‌ಗೆ ತಲಾ 11 ಸ್ಥಾನ, ಬೊಮ್ಮಾಯಿಗೆ ಬಲ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ (MLC Election) 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ (BJP) ಹಾಗೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ (Congress) ತಲಾ 11 ಸೀಟು ಗೆದ್ದು ಸಮಬಲದ ಪ್ರದರ್ಶನ ನೀಡಿವೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 15): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ (MLC Election) 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ (BJP) ಹಾಗೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ (Congress) ತಲಾ 11 ಸೀಟು ಗೆದ್ದು ಸಮಬಲದ ಪ್ರದರ್ಶನ ನೀಡಿವೆ. ಮತ್ತೊಂದು ಪ್ರತಿಪಕ್ಷ ಜೆಡಿಎಸ್‌ ಕೇವಲ 2 ಸ್ಥಾನ ಗಳಿಸಿ ಭಾರೀ ಹಿನ್ನಡೆ ಅನುಭವಿಸಿದೆ.

MLC Election Results: ವಿಧಾನಪರಿಷತ್‌ನಲ್ಲಿ ತನ್ನ ಬಲ ಹೆಚ್ಚಿಸಿಕೊಂಡ ಬಿಜೆಪಿ

ಇನ್ನೊಂದು ಸ್ಥಾನ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸೋದರ ಲಖನ್‌ ಜಾರಕಿಹೊಳಿ ಅವರ ಪಾಲಾಗಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಒಟ್ಟಾರೆಯಾಗಿ ಬಿಜೆಪಿಗೆ 5 ಸ್ಥಾನ ಗಳಿಕೆಯಾಗಿದ್ದರೆ, ಕಾಂಗ್ರೆಸ್‌ಗೆ 3 ಹಾಗೂ ಜೆಡಿಎಸ್‌ಗೆ 2 ಸ್ಥಾನ ನಷ್ಟವಾಗಿದೆ. ಈ ಫಲಿತಾಂಶದೊಂದಿಗೆ ವಿಧಾನ ಪರಿಷತ್ತಿನಲ್ಲಿ ಇದೇ ಮೊದಲ ಬಾರಿಗೆ ಸ್ಪಷ್ಟಬಹುಮತ ದೊರಕುವ ಆಶಾಭಾವನೆಯಲ್ಲಿದ್ದ ಬಿಜೆಪಿಗೆ ನಿರಾಸೆ ಆಗಿದೆ. 

Related Video