'ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ'

 ಕಾಂಗ್ರೆಸ್ - ಬಿಜೆಪಿ ನಡುವೆ ಪಂಚೆ VS ಚಡ್ಡಿ ಜಟಾಪಟಿ ಮುಂದುವರೆದಿದೆ. ಪ್ಯಾಂಟ್ ಕಳಚಿ, ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪಂಚೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಕಾಂಗ್ರೆಸ್ 

First Published Sep 29, 2021, 1:03 PM IST | Last Updated Sep 29, 2021, 1:53 PM IST

ಬೆಂಗಳೂರು (ಸೆ. 29): ಕಾಂಗ್ರೆಸ್ - ಬಿಜೆಪಿ ನಡುವೆ ಪಂಚೆ VS ಚಡ್ಡಿ ಜಟಾಪಟಿ ಮುಂದುವರೆದಿದೆ. ಪ್ಯಾಂಟ್ ಕಳಚಿ, ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪಂಚೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಎಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ. 

ತಾಲಿಬಾನಿಗಳನ್ನು ಐಎಸ್‌ಐ ಉಗ್ರರನ್ನು ಭಾರತದೊಳಕ್ಕೆ ಬಿಟ್ಟಿದ್ದೇ ಕಾಂಗ್ರೆಸ್: ಸಿ ಟಿ ರವಿ

ಸಿದ್ದರಾಮಯ್ಯ ಅವರ ಪಂಚೆ ಆಕಸ್ಮಿಕವಾಗಿ ಕಳಚಿಬೀಳುವುದು ಸಹಜ, ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ನ್ನ ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ, ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ 'ಪ್ಯಾಂಟ್ ಭಾಗ್ಯ' ನೀಡುವೆವು ಚಿಂತಿಸಬೇಡಿ! ಎಂದು ಕಾಂಗ್ರೆಸ್ ಟಾಂಗ್ ನೀಡಿದೆ. 

 

Video Top Stories