ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಹೋರಾಟ: 507 ಡಾಕ್ಟರ್ಸ್‌ ರಿಸೈನ್‌..?

 ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಹೋರಾಟ| 507 ಗುತ್ತಿಗೆ ವೈದ್ಯರು ರಾಜೀನಾಮೆ| ನೇರ ನೇಮಕಾತಿಗೆ ಕಾಲ ಮಿತಿ ನಿಗದಿ, ಗುತ್ತಿಗೆ ವೈದ್ಯರ ಸೂಚನೆ|

First Published Jul 8, 2020, 10:59 AM IST | Last Updated Jul 8, 2020, 11:15 AM IST

ಬೆಂಗಳೂರು(ಜು.08): ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಹೋರಾಟ ಇನ್ನು ಮುಗಿದಿಲ್ಲ. ಹೌದು, ಇವತ್ತು 507 ಗುತ್ತಿಗೆ ವೈದ್ಯರು ರಾಜೀನಾಮೆ ಸಲ್ಲಿಸಲಿದ್ದಾರೆ. ನೇರ ನೇಮಕಾತಿಗೆ ಕಾಲ ಮಿತಿ ನಿಗದಿ, ಗುತ್ತಿಗೆ ವೈದ್ಯರು ಸೂಚನೆ ಕೊಟ್ಟಿದ್ದಾರೆ. ಆದರೆ ನೇರ ನೇಮಕಾತಿಗೆ ಕಾಲ ಮಿತಿ ನಿಗದಿಯಾಗಿಲ್ಲ. 

ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಆಸ್ಪತ್ರೆಯಲ್ಲೇ ಯಡವಟ್ಟು

ನಿನ್ನೆ ನಡೆದ ಸಭೆಯಲ್ಲೂ ಕೂಡ ಒಮ್ಮತ ಮೂಡಲಿಲ್ಲ, ಸೇವೆ ಖಾಯಂ ಯಾವಾಗ ಅಂತ ರಾಜ್ಯ ಸರ್ಕಾರ ಹೇಳುತ್ತಿಲ್ಲ. ಹೀಗಾಗಿ ಇವತ್ತು 507 ಗುತ್ತಿಗೆ ವೈದ್ಯರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.