ಕಂಪ್ಲೀಟ್‌ ಕರ್ನಾಟಕ: ನಕ್ಸಲ್ ಯುಗಾಂತ್ಯ, ಬಿಬಿಎಂಪಿ ಕಚೇರಿಯಲ್ಲಿ 2ನೇ ದಿನವೂ ಇಡಿ ತಲಾಶ್!

ಬರೀ 30 ನಿಮಿಷದಲ್ಲಿ ಇಂದಿನ ಕರ್ನಾಟಕದ ಸಮಗ್ರ ಸುದ್ದಿಗಳು ಸೇರಿದಂತೆ ಕಲ್ಯಾಣ, ಕಿತ್ತೂರು, ಕರಾವಳಿ, ಹಳೇ ಮೈಸೂರಿನ ಕಂಪ್ಲೀಟ್ ಸುದ್ದಿಗಳು. ಕನ್ನಡಿಗರ ನಾಡಿಮಿಡಿತದ ಸ್ಪಷ್ಟ ಪ್ರತಿಫಲನ ಇದುವೇ ಕಂಪ್ಲೀಟ್‌ ಕರ್ನಾಟಕ. 
 

First Published Jan 8, 2025, 9:43 PM IST | Last Updated Jan 8, 2025, 9:43 PM IST

ಬೆಂಗಳೂರು (ಜ.08): ಬರೀ 30 ನಿಮಿಷದಲ್ಲಿ ಇಂದಿನ ಕರ್ನಾಟಕದ ಸಮಗ್ರ ಸುದ್ದಿಗಳು ಸೇರಿದಂತೆ ಕಲ್ಯಾಣ, ಕಿತ್ತೂರು, ಕರಾವಳಿ, ಹಳೇ ಮೈಸೂರಿನ ಕಂಪ್ಲೀಟ್ ಸುದ್ದಿಗಳು. ಕನ್ನಡಿಗರ ನಾಡಿಮಿಡಿತದ ಸ್ಪಷ್ಟ ಪ್ರತಿಫಲನ ಇದುವೇ ಕಂಪ್ಲೀಟ್‌ ಕರ್ನಾಟಕ. ವಿಕ್ರಂಗೌಡ ಎನ್‌ಕೌಂಟರ್ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ 6 ಮಂದಿ ನಕ್ಸಲರು ಇಂದು ಶಸ್ತ್ರಾಸ್ತ್ರವನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದಾರೆ. ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರೀಕ ಸಮಿತಿ ಸತತ ಪ್ರಯತ್ನದ ಅಂಗವಾಗಿ ಇಂದು ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಿದ್ದಾರೆ.  

ದಶಕಗಳಿಂದಲೂ ಬಗೆಹರಿಯದ ದತ್ತಪೀಠ ವಿವಾದ, ಹಕ್ಕು ಸ್ಥಾಪನೆಗಾಗಿ ಹಿಂದೂ ಮುಸ್ಲಿಂಮರ ಹೋರಾಟ, ಸಮಸ್ಯೆ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ 2 ತಿಂಗಳ ಡೆಡ್‌ಲೈನ್ ಕೊಟ್ಟಿದೆ. ಹಾಗೂ ಬಿಬಿಎಂಪಿ ಕಚೇರಿಯಲ್ಲಿ ಎರಡನೇ ದಿನವೂ ಇಡಿ ತಲಾಶ್. ಕಳೆದ 10 ವರ್ಷಗಳಿಂದ ಕಾಮಗಾರಿ ಮಾಹಿತಿ ಸಂಗ್ರಹ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 8 ಕಡೆ ಲೋಕಾಯುಕ್ತ ರೇಡ್ ನಡೆಸಲಾಗಿದೆ. ಎರಡು ತಿಂಗಳ ಹಿಂದೆ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಪರಾರಿಯಾಗಿದ್ದ ಮಂಡ್ಯದ ಟ್ಯೂಷನ್ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಮಂಡ್ಯದಲ್ಲಿ ಅಭಿಷೇಕ್ ಗೌಡ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಕಂಪ್ಲೀಟ್ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.