Asianet Suvarna News Asianet Suvarna News

ಬೆಂಗಳೂರಿನಿಂದ ಊರಿಗೆ ಹೋಗಲು ಬಸ್‌ಗಳಿಲ್ಲ; ಬೆಳಿಗ್ಗೆಯಿಂದ ಪ್ರಯಾಣಿಕರ ಪರದಾಟ

ನಾಳೆ ಲಾಕ್‌ಡೌನ್ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಊರಿನ ಕಡೆ ಪ್ರಯಾಣ ಬೆಳೆಸುತ್ತಿದ್ದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಗುತ್ತಿಲ್ಲ. ಕಾದು ಕಾದು ಸಾಕಾಗಿ ಹೋಗಿದೆ. ಖಾಸಗಿ ಬಸ್‌ಗಳಿಗೆ ಹೆಚ್ಚಿನ ಹಣ ಕೊಡಲು ಆಗುತ್ತಿಲ್ಲ ಅನ್ನೋದು ಬೆಂಗಳೂರು- ಮೈಸೂರು ರಸ್ತೆಯ ಪ್ರಯಾಣಿಕರ ಅಳಲು. 

ಬೆಂಗಳೂರು (ಜು. 13): ನಾಳೆ ಲಾಕ್‌ಡೌನ್ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಊರಿನ ಕಡೆ ಪ್ರಯಾಣ ಬೆಳೆಸುತ್ತಿದ್ದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಗುತ್ತಿಲ್ಲ. ಕಾದು ಕಾದು ಸಾಕಾಗಿ ಹೋಗಿದೆ. ಖಾಸಗಿ ಬಸ್‌ಗಳಿಗೆ ಹೆಚ್ಚಿನ ಹಣ ಕೊಡಲು ಆಗುತ್ತಿಲ್ಲ ಅನ್ನೋದು ಬೆಂಗಳೂರು- ಮೈಸೂರು ರಸ್ತೆಯ ಪ್ರಯಾಣಿಕರ ಅಳಲು. 

ಬೆಂಗಳೂರಿಗೆ ಬೈ ಬೈ ಹೇಳ್ತಿದ್ದಾರೆ ಜನ! ದೇವನಹಳ್ಳಿ ಟೋಲ್‌ನಲ್ಲಿ ಟ್ರಾಫಿಕ್ ಜಾಮೋ ಜಾಮ್..!

ಬೆಳಿಗ್ಗೆಯಿಂದ ಬಸ್‌ಗಾಗಿ ಕಾಯುತ್ತಿದ್ದು, ಬಸ್‌ಗಳಿಲ್ಲದೇ ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಲಾರಿ, ಟಿಪ್ಪರ್, ಟ್ರಕ್ ಹತ್ತಿಕೊಂಡು ಹೋಗುತ್ತಿದ್ದಾರೆ. ಮಹಿಳೆಯರು, ಮಕ್ಕಳು ಪರದಾಡುತ್ತಿದ್ದಾರೆ. ಬರುವ ಬಸ್‌ಗಳು ಫುಲ್ ಆಗಿದ್ದು, ಯಾವುದೂ ನಿಲ್ಲಿಸುತ್ತಿಲ್ಲ. ಬೇರೆ ಬೇರೆ ಭಾಗಗಳಿಗೆ ತೆರಳುವ ಜನರು ಬಹಳ ಸಂಖ್ಯೆಯಲ್ಲಿದ್ದಾರೆ. ಅಲ್ಲಿರುವ ಪ್ರಯಾಣಿಕರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದ್ದಾರೆ. ಇಲ್ಲಿದೆ ನೋಡಿ..!