Hubballi Riot: ನಿಮಗೆ ತಪ್ಪಿತಸ್ಥರು ಮುಸಲ್ಮಾನರೇ ಕಾಣಿಸ್ತಾರಾ..? ಮುತಾಲಿಕ್‌ಗೆ AIMIM ಪ್ರಶ್ನೆ

ಹುಬ್ಬಳ್ಳಿ ಗಲಾಟೆ (Hubballi Riots) ಹಿಂದೆ ಎಐಎಂಐಎಂ (AIMIM) ಕಾರ್ಪೋರೇಟರ್‌ ಕೈವಾಡವಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಆರೋಪಿಸಿದ್ದಾರೆ. ಎಐಎಂಐಎಂನಿಂದ ಮೂರು ಬಾರ ಗೆದ್ದಿರುವ ಕಾರ್ಪೋರೇಟರನ್ನು ಬಂಧಿಸಿ ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ. 

First Published Apr 17, 2022, 1:46 PM IST | Last Updated Apr 17, 2022, 1:46 PM IST

ಧಾರವಾಡ (ಏ,17): ಹುಬ್ಬಳ್ಳಿ ಗಲಾಟೆ (Hubballi Riots) ಹಿಂದೆ ಎಐಎಂಐಎಂ (AIMIM) ಕಾರ್ಪೋರೇಟರ್‌ ಕೈವಾಡವಿದೆ ಎಂದು  ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಆರೋಪಿಸಿದ್ದಾರೆ. ಎಐಎಂಐಎಂನಿಂದ ಮೂರು ಬಾರ ಗೆದ್ದಿರುವ ಕಾರ್ಪೋರೇಟರನ್ನು ಬಂಧಿಸಿ ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ. "ಕಾರ್ಪೋರೆಟರನ್ನು ಒದ್ದು ಒಳಗೆ ಹಾಕಿ, ಮೊಬೈಲ್‌ ಸೀಝ್‌ ಮಾಡಿದ್ರೆ ಸತ್ಯ ಹೊರಗೆ ಬರುತ್ತೆ. ನಿಮ್ಮ ತಾಲಿಬಾನೀಕರಣ ಈ ದೇಶದಲ್ಲಿ ನಡೆಯಲ್ಲ, ನೀವು ಹದ್ದುಬಸ್ತಿನಲ್ಲಿರಿ, ಇಲ್ಲದಿದ್ರೆ ಹಿಂದೂಗಳು ಕೆರಳುತ್ತಾರೆ" ಎಂದು ಮುತಾಲಿಕ್‌ ಹೇಳಿದ್ದಾರೆ. 

ಹುಬ್ಬಳ್ಳಿ ಗಲಾಟೆ ಹಿಂದೆ AIMIM ಕಾರ್ಪೋರೇಟ್ ಕೈವಾಡ: ಪ್ರಮೋದ್ ಮುತಾಲಿಕ್

'ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಬಂಧಿಸಬೇಕು, ತಪ್ಪಿತಸ್ಥರು ನಿಮ್ಮ ಕಣ್ಣಿಗೆ ಮುಸಲ್ಮಾನರೇ ಕಾಣಿಸ್ತಾರಾ..? ಈ ಗಲಭೆ ಹಿಂದೆ ಪೇಯ್ಡ್ ಸರ್ವೆಂಟ್ ಇದ್ದಾರೆ'' ಎಂದು AIMIM ಕಾರ್ಯದರ್ಶಿ ಲತೀಫ್ ಖಾನ್ ಪ್ರತಿಕ್ರಿಯಿಸಿದ್ಧಾರೆ.