Hubballi Riot: 20 ಕ್ಕೂ ಹೆಚ್ಚು ಮಂದಿ ಬಂಧನ, ಪೂರ್ವನಿಯೋಜಿತ ಕೃತ್ಯದ ಅನುಮಾನ

ಹಳೆ ಹುಬ್ಬಳ್ಳಿಯ (Old Hubballi) ನೇಕಾರ ನಗರ ಭಾಗದವನು ಎನ್ನಲಾದ ಯುವಕ ಇಸ್ಲಾಂ ಧರ್ಮದ ಮಸೀದದಿ ಮೇಲೆ ಕೇಸರಿ ಧ್ವಜ ಹಾರಿಸಿದ, ತಲೆ ಕೆಟ್ಟರೆ ಅಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಫೋಟೋ ಎಡಿಟ್‌ ಮಾಡಿ ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾನೆ. 

First Published Apr 17, 2022, 10:17 AM IST | Last Updated Apr 17, 2022, 10:38 AM IST

ಧಾರವಾಡ (ಏ. 17): ಹಳೆ ಹುಬ್ಬಳ್ಳಿಯ (Old Hubballi) ನೇಕಾರ ನಗರ ಭಾಗದವನು ಎನ್ನಲಾದ ಯುವಕ ಇಸ್ಲಾಂ ಧರ್ಮದ ಮಸೀದದಿ ಮೇಲೆ ಕೇಸರಿ ಧ್ವಜ ಹಾರಿಸಿದ, ತಲೆ ಕೆಟ್ಟರೆ ಅಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಫೋಟೋ ಎಡಿಟ್‌ ಮಾಡಿ ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾನೆ. 

Hubballi Riot:ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ, 10 ಜನ ಪೋಲಿಸ್ ಪೇದೆಗಳಿಗೆ ಗಾಯ

ಈ ವಿಚಾರವಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಮುಸ್ಲಿಮರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.  ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಇದು ಪೂರ್ವ ನಿಯೋಜಿತ ಕೃತ್ಯನಾ ಎಂಬ ಅನುಮಾನ ಮೂಡಿಸಿದೆ. 

ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಸೇರಿ 10 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದು, ತ್ವೇಷಮಯ ವಾತಾವರಣ ಉಂಟಾಗಿದೆ. ಗಲಭೆಗೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.