ಸ್ವಾಮೀಜಿಗಳ ಸಿಎಂ ಬದಲಾವಣೆ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ..!

ಕರ್ನಾಟಕದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸ್ವಾಮೀಜಿಗಳು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ.
 

First Published Jun 28, 2024, 11:02 PM IST | Last Updated Jun 28, 2024, 11:02 PM IST

ಬೆಂಗಳೂರು (ಜೂ.28):  ಡಿಕೆಶಿ ಸಿಎಂ ಆಗಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಒತ್ತಾಯದ ನಡುವೆ,  ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಹಿಂದೆ ಇರೋರು ಯಾರು ಅನ್ನೋ ಪ್ರಶ್ನೆ ಸಿಎಂಗೆ ಕಾಡಿದೆ. ಸ್ವಾಮೀಜಿ ಹೇಳಿಕೆ ಬಗ್ಗೆಯೇ ದೆಹಲಿಯಲ್ಲಿ ಸಿಎಂ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಹಿಂದೆ ಯಾರೋ ಇದ್ದಾರೆ. ಯಾರೋ ಹೇಳಿ ಕೊಟ್ಟಿದ್ದಕ್ಕೆ ಸ್ವಾಮೀಜಿ ಹೀಗೆ ಮಾತಾಡಿದ್ದಾರೆ ಎಂದು ಶ್ರೀಗಳ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ. ಸಚಿವ ಜಿ. ಪರಮೇಶ್ವರ್ ಬಳಿ ಸಿಎಂ ಸಿದ್ದರಾಮಯ್ಯ ಅನುಮಾನ ತೋಡಿಕೊಂಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ಮುಗಿಸಿ ವಾಪಸ್ಸಾಗುವ ವೇಳೆ ಸಿಎಂ ಈ ಮಾತನ್ನಾಡಿದ್ದಾರೆ. ಸ್ವಾಮೀಜಿಗಳ ಬಾಯಿಂದ ಈ ಮಾತನ್ನು ಹೇಳಿಸಿದವರು ಯಾರು ಎನ್ನುವ ಕುತೂಹಲ ಸಿಎಂ ಅವರಿಗೂ ಕಾಡಿದೆ.