ಅನರ್ಹ ಶಾಸಕರಿಗೆ ಎದುರಾಯ್ತು ಮತ್ತೊಂದು ಕಂಟಕ !

ಆಪರೇಷನ್ ಕಮಲ ಅಮಿತ್ ಶಾ ಅವರ ತೀರ್ಮಾನ. ಅವರ ನಿರ್ದೇಶನದಂತೆ ನಡೆದಿದ್ದು, ರಾಜೀನಾಮೆ ನೀಡಿದ ಶಾಸಕರನ್ನು ದಿಲ್ಲಿ ಹೋಟೆಲ್ ನಲ್ಲಿ ಇರಿಸಿಕೊಂಡು ನೋಡಿಕೊಂಡಿದ್ದು ಅಮಿತ್ ಶಾ ಅವರೇ ಎಂದು ಹೇಳಿದ ಬಿ.ಎಸ್.ಯಡಿಯೂರಪ್ಪ ಆಡಿಯೋ ಒಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಆಡಿಯೋ ವಿಚಾರವಾಗಿ ಕಾಂಗ್ರೆಸ್ ಕಾನೂನು ಸಮರಕ್ಕೆ ಇಳಿದಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. 

Share this Video
  • FB
  • Linkdin
  • Whatsapp

 ನವದೆಹಲಿ [ನ.04] ಆಪರೇಷನ್ ಕಮಲ ಅಮಿತ್ ಶಾ ಅವರ ತೀರ್ಮಾನ. ಅವರ ನಿರ್ದೇಶನದಂತೆ ನಡೆದಿದ್ದು, ರಾಜೀನಾಮೆ ನೀಡಿದ ಶಾಸಕರನ್ನು ದಿಲ್ಲಿ ಹೋಟೆಲ್ ನಲ್ಲಿ ಇರಿಸಿಕೊಂಡು ನೋಡಿಕೊಂಡಿದ್ದು ಅಮಿತ್ ಶಾ ಅವರೇ ಎಂದು ಹೇಳಿದ ಬಿ.ಎಸ್.ಯಡಿಯೂರಪ್ಪ ಆಡಿಯೋ ಒಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಅನರ್ಹರ ಸ್ಪರ್ಧೆಗೆ ಆಯೋಗ ಸಮ್ಮತಿ...

ಈ ಆಡಿಯೋ ವಿಚಾರವಾಗಿ ಕಾಂಗ್ರೆಸ್ ಕಾನೂನು ಸಮರಕ್ಕೆ ಇಳಿದಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ಈ ಆಡಿಯೋ ವನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದು, ಈ ವಿಚಾರವನ್ನು ಅಂಗೀಕರಿಸಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಇದರಿಂದ ಅನರ್ಹ ಶಾಕರಿಗೆ ಇನ್ನೊಂದು ಬಿಗ್ ಟ್ರಬಲ್ ಎದುರಾಗಿದೆ.

Related Video