ಸಿಎಂ ಬಿಎಸ್‌ವೈ ನೇತೃತ್ವದಲ್ಲಿಂದು ಕೊರೋನಾ ಟಾಸ್ಕ್ ಫೋರ್ಸ್‌ ಸಭೆ

ರಾಜ್ಯದಲ್ಲಿ ಮುಂದಿನ ಒಂದು ತಿಂಗಳು ಕೊರೋನಾ ಸೋಂಕು ಹೆಚ್ಚಳವಾಗುವ ಸೂಚನೆ ಸಿಕ್ಕಿರುವುದರಿಂದ ಕೊರೋನಾ ತಡೆಯುವ ನಿಟ್ಟಿನಲ್ಲಿ ಸನ್ನದ್ಧರಾಗಲು ಕಾರ್ಯತಂತ್ರ ರೂಪಿಸುವ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಬೆಂಗಳೂರಿನ ಅಷ್ಟದಿಕ್ಪಾಲಕರು ಕೊರೋನಾ ನಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆಯೂ ನಡೆಯಲಿದೆ.
 
Share this Video
  • FB
  • Linkdin
  • Whatsapp

ಬೆಂಗಳೂರು(ಜು.20): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಇನ್ನೆರಡು ದಿನಗಳಲ್ಲಿ ಅಂತ್ಯವಾಗಲಿದೆ. ಇದಕ್ಕೂ ಮುನ್ನ ಇಂದು(ಜು.20) ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ.

ರಾಜ್ಯದಲ್ಲಿ ಮುಂದಿನ ಒಂದು ತಿಂಗಳು ಕೊರೋನಾ ಸೋಂಕು ಹೆಚ್ಚಳವಾಗುವ ಸೂಚನೆ ಸಿಕ್ಕಿರುವುದರಿಂದ ಕೊರೋನಾ ತಡೆಯುವ ನಿಟ್ಟಿನಲ್ಲಿ ಸನ್ನದ್ಧರಾಗಲು ಕಾರ್ಯತಂತ್ರ ರೂಪಿಸುವ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಬೆಂಗಳೂರಿನ ಅಷ್ಟದಿಕ್ಪಾಲಕರು ಕೊರೋನಾ ನಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆಯೂ ನಡೆಯಲಿದೆ.

ಕಲಬುರಗಿ: ಜಿಲ್ಲಾಸ್ಪತ್ರೆ ಹಂದಿಗಳ ತಾಣ, ಬಿಜೆಪಿ ಸರಕಾರದ ಕುರಿತು ಶಾಸಕ ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

ಮತ್ತೆ ಲಾಕ್‌ಡೌನ್ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿಗಳ ಸ್ಪಷ್ಟಪಡಿಸಿದ್ದಾರೆ. ಆದರೆ ತಜ್ಞರು ಸಲಹೆ ನೀಡಿದರೆ ಮತ್ತೆ ಬೆಂಗಳೂರಿನಲ್ಲಿ ಲಾಕ್‌ಡೌನ್ ಆದರೆ ಅಚ್ಚರಿಯಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Related Video