Weekend Curfew : ವೀಕೆಂಡ್ ಕರ್ಫ್ಯೂ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಚೂರ್ಣೋತ್ಸವ
ಪ್ರತಿ ಸಂಕ್ರಾತಿಯಂದು ನಡೆಯುವ ಚೂರ್ಣೋತ್ಸವ
ವೀಕೆಂಡ್ ಕರ್ಫ್ಯೂ ನಡುವೆಯೇ ಕೃಷ್ಣಮಠದಲ್ಲಿ ನಡೆದ ಸಂಭ್ರಮ
ಸರಳವಾಗಿ ನಡೆದ ಚೂರ್ಣೋತ್ಸವ ಕಾರ್ಯಕ್ರಮ
ಬೆಂಗಳೂರು (ಜ. 15): ವೀಕೆಂಡ್ ಕರ್ಫ್ಯೂ ನಡುವೆಯೂ ಉಡುಪಿಯ (Udupi) ಕೃಷ್ಣಮಠದಲ್ಲಿ (Krishna Mutt) ಪ್ರತಿ ಸಂಕ್ರಾಂತಿಯಂದು ನಡೆಯುವ ಚೂರ್ಣೋತ್ಸವ (Churnotsava)ಜಾತ್ರೆ ಬಹಳ ಸರಳವಾಗಿ ನೆರವೇರಿತು. ಬಹಳ ಸಂಭ್ರಮದಲ್ಲಿ ಪ್ರತಿ ವರ್ಷ ಈ ಜಾತ್ರೆ ನಡೆಯುತ್ತಿತ್ತಾದರೂ, ವೀಕೆಂಡ್ ಕರ್ಫ್ಯೂ ಕಾರಣದಿಂದಾಗಿ ಈ ಬಾರಿ ಬಹಳ ಸರಳವಾಗಿ ನಡೆದಿದೆ.ಸುಮಾರು 30 ನಿಮಿಷಗಳ ಕಾಲ ಕೃಷ್ಣಮಠದಲ್ಲಿ ಕಾರ್ಯಕ್ರಮ ನಡೆದಿದ್ದು, ಕೇವಲ ಸಾಂಪ್ರದಾಯಿಕ ಆಚರಣೆಗಳನ್ನು ಮಾತ್ರವೇ ಈ ಬಾರಿ ಮಾಡಲಾಯಿತು.
Weekend Curfew : ವ್ಯಾಪಾರ-ವಹಿವಾಟು ಇಲ್ಲದೆ ವ್ಯಾಪಾರಸ್ಥರು ಕಂಗಾಲು
ಕೊರೋನಾ ನಿಯಮಗಳ ಹಿನ್ನೆಲೆಯಲ್ಲಿ ಸರಳವಾಗಿ ಜಾತ್ರೆ ನಡೆಯಿತು. ಸರಳ ಆಚರಣೆ ನಡುವೆಯೂ ಸಹ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಪ್ರಸಂಗಗಳು ನಡೆದವು. ರಥ ಎಳೆಯುವಾಗ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಕಳೆದ 800 ವರ್ಷಗಳಿಂದ ಯಾವೆಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೃಷ್ಣಮಠ ಪಾಲಿಸಿಕೊಂಡು ಬಂದಿದೆಯೋ ಅಂಥ ರಿವಾಜುಗಳನ್ನು ಮಾತ್ರವೇ ಈ ಬಾರಿ ನಡೆಸಲಾಯಿತು. ಸಾಮಾನ್ಯವಾಗಿ 10 ರಿಂದ 20 ಸಾವಿರ ಜನರು ಈ ಜಾತ್ರೆಗೆ ಸೇರುತ್ತಿದ್ದರು. ಆದರೆ, ಜಿಲ್ಲಾಧಿಕಾರಿಯ ಸೂಚನೆ ಅನ್ವಯ ಈ ಬಾರಿ ಅತೀ ಕಡಿಮೆ ಜನರ ನಡುವೆ ಚೂರ್ಣೋತ್ಸವ ನಡೆಸಲಾಗಿದೆ.