Asianet Suvarna News Asianet Suvarna News

ಹೈವೇ ಉದ್ಘಾಟನೆಗೆ ಮೀನಮೇಷ, ವಾಹನಗಳ ಓಡಾಟದಿಂದ ಹೆಚ್ಚಾಗಿದೆ ಅಪಘಾತಗಳ ಭಯ!

- ಚಿತ್ರದುರ್ಗ: ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಇಲ್ಲ!

- ಉದ್ಘಾಟನೆಗೂ ಮುನ್ನವೇ ವಾಹನ ಓಡಾಟಕ್ಕೆ ಮುಕ್ತ

- ಮಾಹಿತಿ ಫಲಕಗಳಿಲ್ಲದೇ ವಾಹನ ಸವಾರರ ಪರದಾಟ
 

ಚಿತ್ರದುರ್ಗ (ಸೆ. 25): ಹೊರವಲಯದಲ್ಲಿ ನಿರ್ಮಾಣವಾಗಿರುವ ರಿಂಗ್ ರೋಡ್ ಖ್ಯಾತಿಯ ಎರಡನೇ ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದೂ, ಉದ್ಘಾಟನಾ ಭಾಗ್ಯ ಮಾತ್ರ  ಈವರೆಗೆ ಸಿಕ್ಕಿಲ್ಲ. ಈ ರಸ್ತೆ ಬೆಂಗಳೂರಿನಿಂದ ದಾವಣಗೆರೆ ಹಾಗೂ ಮಂಗಳೂರಿಗೆ ತೆರಳುವ ಪ್ರಯಾಣಿಕರು ಹಾಗು ಹೂವು, ಹಣ್ಣು ತರಕಾರಿಯನ್ನು ವೇಗವಾಗಿ ರವಾನಿಸಲು ಸಹಕಾರಿಯಾಗಲಿದೆ. 

ರಸ್ತೆ ಮಧ್ಯೆಯೇ ವಿದ್ಯತ್ ಕಂಬ, ಕಾಮಗಾರಿ ಮುಗಿಸಿದ ಎಂಜಿನೀಯರ್; ಸ್ಥಳೀಯರ ಆಕ್ರೋಶ

ಆದರೂ ಬೃಹತ್ ವಾಹನಗಳು ಸೇರಿದಂತೆ ಇತರೆ ವಾಹನಗಳು ಈ ರಸ್ತೆಯಲ್ಲಿ  ಓಡಾಡುತ್ತಿವೆ. ಅಲ್ಲದೇ  ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ, ಯಾವ ರಸ್ತೆ ಎಲ್ಲಿಗೆ ಲಿಂಕ್ ಆಗುತ್ತೆ ಎಂಬ ಮಾಹಿತಿ‌ಯನ್ನು ಹಾಕಿಲ್ಲ. ಜನರು ಸೂಚನೆಯಿಲ್ಲದೇ ಪರದಾಡುವಂತಾಗಿದೆ. ಹೀಗಾಗಿ ಅವಘಡಗಳ ಭೀತಿ ಶುರುವಾಗಿದೆ.