ರಸ್ತೆ ಮಧ್ಯೆಯೇ ವಿದ್ಯುತ್ ಕಂಬ, ಕಾಮಗಾರಿ ಮುಗಿಸಿದ ಎಂಜಿನೀಯರ್; ಸ್ಥಳೀಯರ ಆಕ್ರೋಶ
- ಚಿತ್ರದುರ್ಗ: ರಸ್ತೆ ಮಧ್ಯೆಯೇ ವಿದ್ಯುತ್ ಕಂಬಗಳನ್ನು ಜೊತೆಗೆ ಸೇರಿಸಿ ಕಾಮಗಾರಿ
- ಲೋಕೋಪಯೋಗಿ ಇಲಾಖೆಯಿಂದ 62 ಲಕ್ಷ ರೂ. ಮೊತ್ತದ ಕಾಮಗಾರಿ
- ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರಿಂದ ಆಕ್ರೋಶ, ಕ್ರಮಕ್ಕೆ ಆಗ್ರಹ
ಚಿತ್ರದುರ್ಗ (ಸೆ. 17): ನಗರದ ಆರ್ ಟಿಓ ಕಚೇರಿ ರಸ್ತೆಯ ಮುಂಭಾಗ ಕಳೆದ ಎರಡ್ಮೂರು ದಿನಗಳಿಂದ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಬುದ್ದಿವಂತ ಇಂಜಿನಿಯರ್ ಮಾತ್ರ ಬೆಸ್ಕಾಂ ಲೈಟ್ ಕಂಬಗಳನ್ನು ತೆರವುಗೊಳಿಸಲಿಕ್ಕೂ ತಿಳಿಸದೇ ಅವುಗಳು ರಸ್ತೆಯ ಮಧ್ಯ ಭಾಗದಲ್ಲೇ ಇದ್ದರೂ ಕ್ಯಾರೇ ಎನ್ನದೆ ತನ್ನ ಪಾಡಿಗೆ ತಾನು ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದಾನೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಾಮಗಾರಿ ನಡೆಸಿರೋ ಪುಣ್ಯಾತ್ಮ ಯಾರು? ಅವರಿಗೆ ಕಾಮಗಾರಿ ನಡೆಸಲು ಪರ್ಮಿಷನ್ ಕೊಟ್ಟಂತಹ ಅಧಿಕಾರಿಗಳ ಮೇಲೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಚ್ಚರಿ ಎಂದರೆ ರಸ್ತೆಗಳಲ್ಲಿದ್ದ ಮರಗಳನ್ನು ನೆಲಸಮ ಮಾಡಲಾಗಿದೆ. ವಿದ್ಯುತ್ ಕಂಬಗಳನ್ನು ಮಾತ್ರ ತೆರವುಗೊಳಿಸಿಲ್ಲ!