Asianet Suvarna News Asianet Suvarna News

ಮೂವರು ಮಕ್ಕಳು ಅಂಧರು, ಪಿಂಚಣಿ ಇಲ್ಲ, ಕೆಲಸವೂ ಇಲ್ಲ; ಅಧಿಕಾರಿಗಳೇ ಇನ್ನಾದ್ರೂ ಕಣ್ಣು ಬಿಡಿ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾ. ಚಿನ್ನಂಪಲ್ಲಿ ಗ್ರಾಮದ ಈ ಕುಟುಂಬಕ್ಕೆ ಅಂಧತ್ವವೇ ಶಾಪವಾಗಿದೆ. ಈ ಮಕ್ಕಳು ಪದವಿಯನ್ನೂ ಪೂರೈಸಿದ್ದಾರೆ. ಸರ್ಕಾರದಿಂದ ಬರುತ್ತಿದ್ದ ಪಿಂಚಣಿಯಲ್ಲಿ ಹಾಗೋ ಹೀಗೋ ಜೀವನ ನಡೆಸುತ್ತಿದ್ದರು. 

Nov 25, 2020, 3:31 PM IST

ಬೆಂಗಳೂರು (ನ. 25): ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾ. ಚಿನ್ನಂಪಲ್ಲಿ ಗ್ರಾಮದ ಈ ಕುಟುಂಬಕ್ಕೆ ಅಂಧತ್ವವೇ ಶಾಪವಾಗಿದೆ. ಈ ಮಕ್ಕಳು ಪದವಿಯನ್ನೂ ಪೂರೈಸಿದ್ದಾರೆ. ಸರ್ಕಾರದಿಂದ ಬರುತ್ತಿದ್ದ ಪಿಂಚಣಿಯಲ್ಲಿ ಹಾಗೋ ಹೀಗೋ ಜೀವನ ನಡೆಸುತ್ತಿದ್ದರು. ಕಳೆದ 4 ತಿಂಗಳಿಂದ ಪಿಂಚಣಿ ಬರದೇ ಜೀವನ ನಡೆಸುವುದು ಕಷ್ಟವಾಗಿದೆ. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. 

ಬಿಗ್‌ 3 ಇಂಪ್ಯಾಕ್ಟ್ : ಚಿಕ್ಕ ಬಳ್ಳಾಪುರದ ಅಂಧರ ಕುಟುಂಬಕ್ಕೆ ಸಿಕ್ತು ನೆರವು

ಮೂವರೂ ಕೂಡಾ ಪದವಿಯನ್ನು ಮುಗಿಸಿದ್ದಾರೆ. ಕೆಲಸವಿಲ್ಲದೇ, ಆದಾಯವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಪಿಂಚಣಿ ಕೂಡಾ ಬರದೇ ಜೀವನ ದುಸ್ತರವಾಗಿದೆ. ಇವರಿಗೊಂದು ಕೆಲಸ ಸಿಕ್ಕಿದರೆ ಅನುಕೂಲವಾಗುವುದು. ಅಧಿಕಾರಿಗಳೇ, ಅಲಸ್ಯ ಬಿಡಿ. ನಿಮ್ಮ ಕರ್ತವ್ಯ ನಿರ್ವಹಿಸಿ. ಈ ಕುಟುಂಬಕ್ಕೆ ನಿಮ್ಮ ವ್ಯಾಪ್ತಿಯಲ್ಲಾಗುವ ಸಹಾಯ ಮಾಡಿ..!