ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವಾ?: ದೈವರಾಧನೆ ಕೆಣಕುವ ವಿಚಾರವಲ್ಲ ಅಂದ್ರು!

ಕನ್ನಡದ ನಟ ಚೇತನ್ 'ಕಾಂತಾರ' ಸಿನಿಮಾದ ಬಗ್ಗೆ ಪೋಸ್ಟ್ ಹಾಕಿದ್ದು, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದಿದ್ದಾರೆ. ಈ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದ್ದು, ಕವಿತಾ ರೆಡ್ಡಿ ಹಾಗೂ ತಮಣ್ಣ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
 

Share this Video
  • FB
  • Linkdin
  • Whatsapp

 ನಟ ಚೇತನ್ ಹೇಳಿಕೆಯನ್ನು ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಸರಿ ಎಂದು ಹೇಳಿದ್ದು, ಭೂತ ಕೋಲ ಹಿಂದೂ ಸಂಸ್ಕೃತಿಗಿಂತ ಪುರಾತನದ್ದು, ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಆಚರಣೆ ಅಲ್ಲ ಎಂದಿದ್ದಾರೆ. ಇನ್ನು ತಮಣ್ಣ ಶೆಟ್ಟಿ ಮಾತನಾಡಿದ್ದು, ರಾಜಕಾರಣಿಗಳು ಅವರವರ ಮಾನದಂಡದಡಿಯಲ್ಲಿ ಕೆಲಸವನ್ನು ಮಾಡಿಕೊಂಡು ಹೋದರೆ ಉತ್ತಮ. ಯಾವುದೇ ಕಾರಣಕ್ಕೂ ದೈವರಾಧನೆಯನ್ನು ಕೆಣಕುವುದು ಅಥವಾ ಚರ್ಚೆ ಮಾಡುವ ವಿಷಯವಲ್ಲ ಎಂದಿದ್ದಾರೆ.

ರಿಷಬ್ ಶೆಟ್ಟಿ ಹೇಳಿದ ಹಾಗೆ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ; ನಟ ಚೇತನ್ ಕುಮಾರ್

Related Video