ದಳಪತಿ ವಿರುದ್ಧ ಕುಸ್ತಿಗಿಳಿದ ಸೈನಿಕನಿಗೆ ದೋಸ್ತಿಯಾಗ್ತಾರಾ ಡಿಕೆ?
ಟಿಕೆಟ್ ಕೊಡೋದಾದ್ರೆ ಕಮಲ ಚಿಹ್ನೆಯಲ್ಲಿ ಕೊಡಿ. ಇಲ್ಲವಾದ್ರೆ ಪಕ್ಷೇತರನಾಗಿ ನಿಲ್ತೇನೆ ಎನ್ನುವ ಸೈನಿಕನ ಹಠ ಈಗ ರಾಜ್ಯ ರಾಜಕಾರಣದಲ್ಲಿ ಹಾಟ್ ಟಾಪಿಕ್ ಆಗಿದೆ. ಬಿಜೆಪಿ ಎಂ.ಎಲ್.ಸಿ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಅವರ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಕುತೂಹಲ ಆರಂಭವಾಗಿದೆ.
ಬೆಂಗಳೂರು (ಅ.22): ಕೊಟ್ಟರೆ ಕಮಲ. ಬಿಟ್ಟರೆ ಪಕ್ಷೇತರ. ಚನ್ನಪಟ್ಟಣ ರಣಕಣದಲ್ಲಿ ಇದು ಸೈನಿಕನ ಹಠ. ಟಿಕೆಟ್‌ಗಾಗಿ ಮೈತ್ರಿ ಜೊತೆ ಕುಸ್ತಿಗೆ ಇಳಿದಿರುವ ಯೋಗೇಶ್ವರ್‌ಗೆ ದೋಸ್ತಿಯಾಗ್ತಾರಾ ಡಿಕೆ ಶಿವಕುಮಾರ್ ಅನ್ನೋ ಪ್ರಶ್ನೆಯೂ ಎದ್ದಿದೆ.
ಸಿಪಿವೈ ಈಗಾಗಲೇ ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ. ಹಿರಿಯ ನಾಯಕರ ಮೇಲೆಯೇ ಅವರು ಗರಂ ಆಗಿದ್ದಾರೆ. ಮೈತ್ರಿ ಮೇಲೆ ಮುನಿಸಿಕೊಂಡಿರೋ ಸೈನಿಕನ ಮುಂದಿರೋದು ಯಾವ ಹಾದಿ ಅನ್ನೋ ಕುತೂಹಲ ಎಲ್ಲರಲ್ಲಿದೆ. ಕರುನಾಡ ಚಿತ್ತವನ್ನ ತನ್ನತ್ತ ಸೆಳೆದಿರುವ ಬೊಂಬೆನಾಡಿನಲ್ಲಿ ಈಗ ಶುರುವಾಗಿರೋದು ನಿಜವಾದ ರಾಜಕೀಯ ಚದುರಂಗದಾಟ.
ಚನ್ನಪಟ್ಟಣದ ಚೆಕ್‌ಮೇಟ್, ಸಿಪಿ ಯೋಗೇಶ್ವರ್ ರಾಜೀನಾಮೆಗೆ ಬಿಜೆಪಿ ಕಂಗಾಲು!
ಸಿ.ಪಿ.ಯೋಗೇಶ್ವರ್ ಮುಂದಿನ ನಡೆ ಏನು ಅಂತ ಎಲ್ಲರೂ ನೋಡ್ತಿರುವಾಗ, ಅವರು ತಮ್ಮ ಪಕ್ಷದ ಹಿರಿಯ ನಾಯಕರ ಮೇಲೆಯೇ ಹರಿಹಾಯ್ದಿದ್ದಾರೆ. ಜೊತೆಗೆ, ಕಾಂಗ್ರೆಸ್ ಮೇಲೆ ಕೊಂಚ ಸಾಫ್ಟ್ ಆಗಿದ್ದಾರೆ. ಇದರ ಹಿಂದಿರೋ ಆ ತಂತ್ರವೇನು ಅನ್ನೋ ಪ್ರಶ್ನೆಯೇ ಎಲ್ಲರಲ್ಲಿದೆ.