ಚನ್ನಪಟ್ಟಣದ ಚೆಕ್‌ಮೇಟ್, ಸಿಪಿ ಯೋಗೇಶ್ವರ್‌ ರಾಜೀನಾಮೆಗೆ ಬಿಜೆಪಿ ಕಂಗಾಲು!

ಚನ್ನಪಟ್ಟ ಕಸರತ್ತಿನಲ್ಲಿ ರಾಜೀನಾಮೆ ದಾಳ ಉರುಳಿಸಿದ ಸಿಪಿ ಯೋಗೇಶ್ವರ್, ದಳಪತಿಗಳ ಪಟ್ಟು ಬಿಗಿ, ಸಂಡೂರು ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ಗೆ ಗೊಂದಲ, ಉಪ ಚುನಾವಣೆ ರಾಜಕೀಯ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಚನ್ನಪಟ್ಟಣದ ಕಗ್ಗಂಟು ಹೆಚ್ಚಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಸಿಪಿ ಯೋಗೇಶ್ವರ್ ಕನಸಿಗೆ ಕೊಳ್ಳಿ ಇಡುವ ಸಾಧ್ಯತೆ ದಟ್ಟವಾಗಿದೆ. ಉಪ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ 2 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದೆ. ಆದರೆ ಚನ್ನಪಟ್ಟಣದಲ್ಲಿ ಮಾತ್ರ ಅಭ್ಯರ್ಥಿ ಫೈನಲ್ ಆಗಿಲ್ಲ. ಸಿಪಿ ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿದ್ದರೆ, ಇತ್ತ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪ್ರಬಲ ಕ್ಷೇತ್ರ ಇದಾಗಿದೆ. ಆದರೆ ಮೈತ್ರಿ ಧರ್ಮಾ ಪಾಲನೆಯಿಂದಾಗಿ ಈ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದರ ಬೆನ್ನಲ್ಲೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯನ್ನು ಕಂಗಾಲು ಮಾಡಿದೆ. 

Related Video