ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಮಾಡಿದ್ದೇವೆ; ಪ್ರತಾಪ್ ಸಿಂಹ ಸ್ಪಷ್ಟನೆ

ಚಾಮರಾಜನಗರದಲ್ಲಿ 24 ಗಂಟೆಗಳಲ್ಲಿ 24 ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ಧಾರೆ. ಈ ದುರಂತ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅವ್ಯವಸ್ಥೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ, ಅವರಿವರ ಮೇಲೆ ಹಾಕುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 03): ಚಾಮರಾಜನಗರದಲ್ಲಿ 24 ಗಂಟೆಗಳಲ್ಲಿ 24 ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ಧಾರೆ. ಈ ದುರಂತ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅವ್ಯವಸ್ಥೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ, ಅವರಿವರ ಮೇಲೆ ಹಾಕುತ್ತಿದ್ದಾರೆ.

ಚಾಮರಾಜನಗರದಲ್ಲಿ 24 ಸಾವುಗಳು ಆಕ್ಸಿಜನ್ ಕೊರತೆಯಿಂದಲ್ಲ: ಸುರೇಶ್ ಕುಮಾರ್

ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. 'ಚಾಮರಾಜನಗರದಿಂದ ಆಕ್ಸಿಜನ್ 180 ಸಿಲಿಂಡರ್‌ಗೆ ಬೇಡಿಕೆ ಬಂದಾಗ ನಾವು ಕೂಡಲೇ 140 ಸಿಲಿಂಡರ್ ಕೊಟ್ಟಿದ್ದೇವೆ. ಮೈಸೂರಿನಿಂದ ನೆರವು ಕೊಟ್ಟಿಲ್ಲ ಎಂಬ ಭಾವನೆ ಬೇಡ. ಕೋವಿಡ್ ಮೊದಲ ಅಲೆ ಬಂದಾಗ ನಾವು ಮೈಸೂರಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡೆವು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ' ಎಂದು ಹೇಳಿದ್ಧಾರೆ. 

Related Video