ಸತ್ಯ ಬಾಯ್ಬಿಟ್ಟ ಸಲೂನ್ ಮಾಲೀಕನಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ಧಮ್ಕಿ!

ಬಂಧನದಲ್ಲಿರುವ ಚೈತ್ರಾ ಕುಂದಾಪುರ ಹೊಸ ಬಾಂಬ್, ಜೈಲಿನಲ್ಲಿದ್ದರೂ ಚೈತ್ರ ಗ್ಯಾಂಗ್‌ನಿಂದ ಧಮ್ಕಿ ಶುರು, ಬಿಕೆ ಹರಿಪ್ರಸಾದ್ ಬಂಡಾಯ ಶಮನಕ್ಕೆ ಕಾಂಗ್ರೆಸ್ ಪ್ರಯತ್ನ ಸೇರಿದಂತೆ  ಇಂದಿನ ಇಡಿ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಚೈತ್ರಾ ಕುಂದಾಪುರ ಗ್ಯಾಂಗ್ ಹೆಣೆದ ನಾಟಕದಲ್ಲಿ ಉದ್ಯಮಿಗೋವಿಂದ ಬಾಬು 5 ಕೋಟಿ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಚೈತ್ರಾ ಗ್ಯಾಂಗ್ ಜೈಲು ಸೇರಿದೆ. ಈ ಕುರಿತ ಸತ್ಯ ಬಾಯ್ಬಿಟ್ಟ ಸಲೂನ್ ಮಾಲೀಕನಿಗೆ ಇದೀಗ ಚೈತ್ರಾ ಗ್ಯಾಂಗ್ ದಮ್ಕಿ ಹಾಕಿದೆ. ಇತ್ತ ಚೈತ್ರಾ ಕುಂದಾಪುರ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇರುವ ಕಾರಣ ಈ ಷಡ್ಯಂತ್ರ ಮಾಡಲಾಗಿದೆ ಎಂದು ಚೈತ್ರಾ ಹೇಳಿದ್ದಾರೆ. ಇಷ್ಟೇ ಅಲ್ಲ, ಸ್ವಾಮೀಜಿ ಸಿಕ್ಕಿ ಹಾಕಿಕೊಂಡರೆ ಎಲ್ಲಾ ಸತ್ಯ ಹೊರಗೆಬರಲಿದೆ ಎಂದಿದ್ದಾರೆ. ಈ ವಂಚನೆ ಪ್ರಕರಣದೊಳಗೆ ಹಲವು ಕತೆಗಳನ್ನು ಹೆಣೆಯಲಾಗಿದೆ. ಹಲವು ಪಾತ್ರಧಾರಿಗಳನ್ನು ಸೃಷ್ಟಿಸಿ ಬಹುದೊಡ್ಡ ವಂಚನೆ ಮಾಡಲಾಗಿದೆ.

Related Video