Asianet Suvarna News Asianet Suvarna News

ಹಣ ವಾಪಸ್ ಕೇಳಿದ ಗೋವಿಂದ ಬಾಬು ವಿರುದ್ದ ಚೈತ್ರಾ ಹೈಡ್ರಾಮ, ಐಟಿ ಇಡಿಗೆ ದೂರು!

ಚೈತ್ರಾ ಕುಂದಾಪುರ ಪ್ರಕರಣ ಬಗೆದಷ್ಟು ಸ್ಫೋಟಕ ಮಾಹಿತಿ ಬಯಲು, ಕಾವೇರಿ ನದಿ ಹಂಚಿಕೆಯಲ್ಲಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆ, ನೀರು ಹರಿಸಲು ಪ್ರಾದಿಕಾರ ರಾಜ್ಯಕ್ಕೆ ಸೂಚನೆ, ಸಿದ್ದು ಸರ್ಕಾರಕ್ಕೆ ಬಿಕೆ ಹರಿಪ್ರಸಾದ್ ಬಳಿಕ ರಾಜಣ್ಣ ತಲೆನೋವು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಉದ್ಯಮಿ ಗೋವಿಂದ್ ಬಾಬುಗೆ 5 ಕೋಟಿ ರೂಪಾಯಿ ಪಂಗನಾಮ ಹಾಕಿದ್ದ ಚೈತ್ರಾ ಕುಂದಾಪುರ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳಲು ಆರಂಭಿಸುತ್ತಿದ್ದಂತೆ ದೂರು ದಾಖಲಾಗಿತ್ತು. ಚೈತ್ರಾ ವಿರುದ್ಧ ದೂರು ನೀಡಿದ ಗೋವಿಂದ ಬಾಬುಗೆ ಚೈತ್ರಾ ಐಟಿ ಹಾಗೂ ಇಡಿ ಬೆದರಿಕೆ ಹಾಕಿದ್ದರು. ಇಷ್ಟೇ ಅಲ್ಲ ಗೋವಿಂದ ಬಾಬು ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ. ಆಕ್ರಮ ಆದಾಯಗಳಿಸಿದ್ದಾರೆ ಎಂದು ಐಟಿ ಹಾಗೂ ಇಡಿಗೆ ಚೈತ್ರಾ ಪತ್ರ ಬರೆದಿರುವುದು ಬಯಲಾಗಿದೆ.  ಚೈತ್ರಾ ಕುಂದಾಪುರ ತನಿಖೆಯಲ್ಲಿ ಬಗೆದಷ್ಟು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಇತ್ತ ಅಧಿಕಾರಿಗಳು ಚೈತ್ರಾ ಆಸ್ತಿಯನ್ನು ಮುಟ್ಟುಗೋಲು ಮಾಡಿದ್ದಾರೆ.

Video Top Stories