ಕಾಫಿ ಡೇ ಸಿದ್ಧಾರ್ಥ್‌ಗೆ ಮುಳುವಾಗಿದ್ದೇ ಈ ವ್ಯವಹಾರವಾ? ಆಂತರಿಕ ತನಿಖೆಯಿಂದ ಬಯಲಾದ ಅಂಶಗಳು

ಖ್ಯಾತ ಉದ್ಯಮಿ, ಕಾಫೀ ಡೇ ಸಮೂಹದ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಿದ್ದ ಸಿಬಿಐನ ನಿವೃತ್ತ ನಿರ್ದೇಶಕ ಅಶೋಕ್‌ ಕುಮಾರ್‌ ಮಲ್ಹೋತ್ರಾ ನೇತೃತ್ವದ ಸಮಿತಿ, ಸಿದ್ಧಾರ್ಥ ಅವರು ಕಾಫೀಡೇನಿಂದ ಸುಮಾರು 3535 ಕೋಟಿ ರು.ಗಳನ್ನು ತಮ್ಮ ಸ್ವಂತ ಕಂಪನಿಗಳಿಗೆ ವರ್ಗಾಯಿಸಿದ್ದನ್ನು ಕಂಡುಕೊಂಡಿದೆ. ಅಲ್ಲದೆ ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆಗೆ ಕ್ಲೀನ್‌ಚಿಟ್‌ ನೀಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 25): ಖ್ಯಾತ ಉದ್ಯಮಿ, ಕಾಫೀ ಡೇ ಸಮೂಹದ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಿದ್ದ ಸಿಬಿಐನ ನಿವೃತ್ತ ನಿರ್ದೇಶಕ ಅಶೋಕ್‌ ಕುಮಾರ್‌ ಮಲ್ಹೋತ್ರಾ ನೇತೃತ್ವದ ಸಮಿತಿ, ಸಿದ್ಧಾರ್ಥ ಅವರು ಕಾಫೀಡೇನಿಂದ ಸುಮಾರು 3535 ಕೋಟಿ ರು.ಗಳನ್ನು ತಮ್ಮ ಸ್ವಂತ ಕಂಪನಿಗಳಿಗೆ ವರ್ಗಾಯಿಸಿದ್ದನ್ನು ಕಂಡುಕೊಂಡಿದೆ. ಅಲ್ಲದೆ ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆಗೆ ಕ್ಲೀನ್‌ಚಿಟ್‌ ನೀಡಿದೆ.

ಕಾಫೀ ಡೇನಿಂದ ಸ್ವಂತ ಕಂಪನಿಗೆ 3500 ಕೋಟಿ ರೂ ವರ್ಗಾಯಿಸಿದ್ದ ಸಿದ್ದಾರ್ಥ್!

ಸಿದ್ದಾರ್ಥ ಅವರ ಸ್ವಂತ ಕಂಪನಿಯಾದ ಎಂಎಸಿಇಎಲ್‌, ಸಿಡಿಇಎಲ್‌ನ 49 ಸಹ ಸಂಸ್ಥೆಗಳ ಜೊತೆ ಹಣಕಾಸು ವ್ಯವಹಾರ ಹೊಂದಿತ್ತು. ಸಿಡಿಇಎಲ್‌ನ ವಿವಿಧ ಕಂಪನಿಗಳಿಂದ ಎಂಎಸಿಇಲ್‌ ಮುಂಗಣ ಹಣ ಪಡೆದುಕೊಂಡಿತ್ತು. ಈ ಎಲ್ಲಾ ವ್ಯವಹಾರಗಳು ಸಾಮಾನ್ಯ ಬ್ಯಾಂಕಿಂಗ್‌ ವಹಿವಾಟಿನ ಸ್ವರೂಪದಲ್ಲೇ ನಡೆದಿತ್ತು. ಹೀಗೆ ಪಡೆದ ಬಹುತೇಕ ಹಣವನ್ನು ಪಿಇ ಹೂಡಿಕೆದಾರರಿಂದ ಷೇರು ಮರುಖರೀದಿಗೆ, ಸಾಲ ಮರುಪಾವತಿಗೆ, ಬಡ್ಡಿ ಪಾವತಿಗೆ, ಇತರೆ ಕೆಲ ಖಾಸಗಿ ಹೂಡಿಕೆಗೆ ಬಳಸಿರುವ ಸಾಧ್ಯತೆ ಇದೆ ಎಂದು ಸಮಿತಿ ಹೇಳಿದೆ.

Related Video