Cabinet Reshuffle: ಮಂತ್ರಿ ಸ್ಥಾನಕ್ಕೆ ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ಲಾಬಿ ಬಲು ಜೋರು..!

ಈ ಮೊದಲು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಕ್ರಾಂತಿ ಬಳಿಕ ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡಿದ್ದರು. ಆದರೆ ಇದೀಗ ಪಂಚರಾಜ್ಯಗಳ ಚುನಾವಣೆವರೆಗೂ ಸಚಿವ ಸಂಪುಟ ಪುನಾರಚನೆ ಅನುಮಾನ ಎನಿಸಿದೆ. 

First Published Jan 20, 2022, 10:54 AM IST | Last Updated Jan 20, 2022, 10:54 AM IST

ಬೆಂಗಳೂರು(ಜ.20): ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟದ ಪುನಾರಚನೆಯ (Cabinet Reshuffle) ಕುರಿತಂತೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಆಸೆ ಗರಿಗೆದರಿದೆ. ಇನ್ನು ಹೈಕಮಾಂಡ್ ಕೂಡಾ ಪುನಾರಚನೆಗೆ ಗ್ರೀನ್ ಸಿಗ್ನಲ್‌ ಕೊಡುವ ನಿರೀಕ್ಷೆಯಿದ್ದು, ಇದೀಗ ಬಿಜೆಪಿ (BJP) ಪಾಳಯದಲ್ಲಿ ಸಚಿವಾಕಾಂಕ್ಷಿಗಳ ಸರ್ಕಸ್ ಜೋರಾಗಿದೆ. 

ಈ ಮೊದಲು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಂಕ್ರಾಂತಿ ಬಳಿಕ ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡಿದ್ದರು. ಆದರೆ ಇದೀಗ ಪಂಚರಾಜ್ಯಗಳ ಚುನಾವಣೆವರೆಗೂ ಸಚಿವ ಸಂಪುಟ ಪುನಾರಚನೆ ಅನುಮಾನ ಎನಿಸಿದೆ. 

Siddu vs BJP ನೆಲದ ಸಮಾಜ ಸುಧಾರಕರನ್ನು ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತಿದೆ, ಸಿದ್ದು ಗುದ್ದು

ಕಳೆದ ಎರಡು ಅವಧಿಯಲ್ಲಿ ಮಂತ್ರಿ ಆದವರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಡ ಜೋರಾಗಿದೆ. ಇನ್ನು ಕೊನೆಯ ಒಂದು ವರ್ಷದ ಅವಧಿಗೆ ಹೊಸಬರಿಗೆ ಅವಕಾಶ ನೀಡಲು ಆಗ್ರಹ ಕೇಳಿಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.