ನೈಟ್ ಕರ್ಫ್ಯೂ: ಸರ್ಕಾರದ ನಿರ್ಧಾರಕ್ಕೆ ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆ...!
ರಾತ್ರಿ ವೇಳೆ ಮಾತ್ರ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ವಿಪಕ್ಷ ನಾಯಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ರೂಪಾಂತರ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲೂ ಟೀಕೆಗಳು ಕೇಳಿಬಂದಿವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆಯಾಗಿದೆ.
ಬೆಂಗಳೂರು, (ಡಿ.24): ರೂಪಾಂತರಗೊಂಡ ಹೊಸ ಕೊರೋನಾ ವೈರಸ್ ಹಬ್ಬುವ ಆತಂಕದ ಹಿನ್ನೆಲೆ ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ಆದ್ರೆ ನೈಟ್ ಕರ್ಫ್ಯೂ ಜಾರಿ ಮಾರ್ಗಸೂಚಿಗಳು ಗೊಂದಲದ ಗೂಡಾಗಿವೆ.
ನೈಟ್ ಕರ್ಫ್ಯೂನಿಂದ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಎಂದ ಆರೋಗ್ಯ ಸಚಿವ
ಅಲ್ಲದೆ ರಾತ್ರಿ ವೇಳೆ ಮಾತ್ರ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ವಿಪಕ್ಷ ನಾಯಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ರೂಪಾಂತರ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲೂ ಟೀಕೆಗಳು ಕೇಳಿಬಂದಿವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆಯಾಗಿದೆ.