Shivamogga: ಹರ್ಷನ ಹತ್ಯೆಗೆ ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು: ಸೂಲಿಬೆಲೆ

ದುಷ್ಕರ್ಮಿಗಳ ಕೈಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನಾಯಕರ ದಂಡು ಮನೆಯತ್ತ ಹರಿದುಬರುತ್ತಿದೆ.ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

First Published Feb 23, 2022, 5:16 PM IST | Last Updated Feb 23, 2022, 5:16 PM IST

ಬೆಂಗಳೂರು (ಫೆ. 23): ದುಷ್ಕರ್ಮಿಗಳ ಕೈಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನಾಯಕರ ದಂಡು ಮನೆಯತ್ತ ಹರಿದುಬರುತ್ತಿದೆ.ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

'ಈ ಹತ್ಯೆಯ ಹಿಂದಿರುವವರನ್ನು ಹೊರ ತರಬೇಕು. ಈ ಹಂತಕರ ತಲೆಗೆ ತುಂಬುವವರು ಯಾರು..? ಇವರಲ್ಲವೂ ಹೊರ ಬರಬೇಕು. ಅವರನ್ನು ತಪ್ಪಿಸಿಕೊಳ್ಳಲು ಬಿಡಬಾರದು. ಸರ್ಕಾರ ಕಣ್ಣೊರೆಸುವ ಕೆಲಸ ಮಾಡಬಾರದು. ಈ ಬಂಧಿಸ್ತಾರೆ, ಆಮೇಲೆ ಜಾಮೀನಿನ ಮೇಲೆ ಹೊರ ಬಂದು ತಿರುಗಾಡುತ್ತಾರೆ. ಇದಕ್ಕೆಲ್ಲಾ ಅವಕಾಶ ಕೊಡಬಾರದು' ಎಂದು ಚಕ್ರವರ್ತಿ ಸೂಲಿಬೆಲೆ  ಸರ್ಕಾರಕ್ಕೆ ಆಗ್ರಹಿಸಿದರು. 

 

Video Top Stories