
ಕಾಂಗ್ರೆಸ್ ಗ್ಯಾರಂಟಿ ಬೆನ್ನಲ್ಲೇ BPL ಕಾರ್ಡ್‌ಗೆ ಹೆಚ್ಚಿದ ಬೇಡಿಕೆ: ಆಹಾರ ಇಲಾಖೆ ಕಚೇರಿಗೆ ಮುಗಿಬಿದ್ದ ಜನ
ರಾಜ್ಯದಲ್ಲಿ 2.87 ಲಕ್ಷ ಬಿಪಿಎಲ್ ಹಾಗೂ 46,576 ಎಪಿಎಲ್ ಕಾರ್ಡ್ ಸೇರಿದಂತೆ ಒಟ್ಟು 3.34 ಲಕ್ಷ ಕಾರ್ಡ್‌ಗೆ ಅರ್ಜಿಗಳು ಬಂದಿದ್ದು, ವಿಲೇವಾರಿಗೆ ಬಾಕಿ ಇದೆ. ಇಲ್ಲಿಯವರೆಗೂ ರಾಜ್ಯದಲ್ಲಿ 4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆ ಆಗಿದೆ.
ಬೆಂಗಳೂರು (ಮೇ.26): ರಾಜ್ಯದಲ್ಲಿ ನೂತನ ಸರ್ಕಾರ ಬರುತ್ತಿದ್ದಂತೆ ಬಿಪಿಎಲ್ ಕಾರ್ಡ್‌ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಇದಕ್ಕೆ ಕಾರಣ ಏನು ಅಂತಾ ಗೊತ್ತಾ? ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ. ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಬಹುಮತದ ಸರ್ಕಾರ ಬರುತ್ತಿದೆ ಅನ್ನೋದು ಖಚಿತ ಆಗುತ್ತಿದ್ದಂತೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಬಿಪಿಎಲ್ ಕಾರ್ಡಿಗೆ ಬೇಡಿಕೆ ಹೆಚ್ಚಾಗಲು ಕಾರಣ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳು.
ಕಾಂಗ್ರೆಸ್ ಸರ್ಕಾರದಲ್ಲಿ ಸ್ಕೀಂ ಪಡೆಯಲು ಬಿಪಿಎಲ್ ಕಾರ್ಡ್ ಮಾನದಂಡ ಎಂದು ಜನತೆ ಭಾವಿಸಿದ್ದು, ರಾಜ್ಯಾದ್ಯಂತ ಆಹಾರ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ. ಕಳೆದ 2 ವಾರಗಳಿಂದ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 27 ಸಾವಿರದ 411 ಅರ್ಜಿ, ವಿಜಯಪುರದಲ್ಲಿ 17 ಸಾವಿರದ 228 ಅರ್ಜಿ, ಬೆಂಗಳೂರಿನಲ್ಲಿ 12 ಸಾವಿರದ 765 ಅರ್ಜಿ, ಬೀದರ್ ಜಿಲ್ಲೆಯಿಂದ 12 ಸಾವಿರದ 661 ಅರ್ಜಿ ಹಾಗು ರಾಯಚೂರಿನಿಂದ 12 ಸಾವಿರದ 498 ಅರ್ಜಿಗಳು ಸಲ್ಲಿಕೆ ಆಗಿವೆ. ಸದ್ಯ ರಾಜ್ಯದಲ್ಲಿ 2.87 ಲಕ್ಷ ಬಿಪಿಎಲ್ ಹಾಗೂ 46,576 ಎಪಿಎಲ್ ಕಾರ್ಡ್ ಸೇರಿದಂತೆ ಒಟ್ಟು 3.34 ಲಕ್ಷ ಕಾರ್ಡ್‌ಗೆ ಅರ್ಜಿಗಳು ಬಂದಿದ್ದು, ವಿಲೇವಾರಿಗೆ ಬಾಕಿ ಇದೆ. ಇಲ್ಲಿಯವರೆಗೂ ರಾಜ್ಯದಲ್ಲಿ 4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆ ಆಗಿದೆ.