Asianet Suvarna News Asianet Suvarna News

ಗಡಿ ನಿರ್ಬಂಧ: ಕೇರಳ ಸರ್ಕಾರದ ವಿರುದ್ಧ ಟ್ವಿಟರ್ ವಾರ್

ಗಡಿ ಕ್ಯಾತೆ ತೆಗೆದ ಕೇರಳ ಸರ್ಕಾರದ ವಿರುದ್ಧ ಕನ್ನಡಿಗರು ಟ್ವಿಟರ್ ವಾರ್ ನಡೆಸಿದ್ದಾರೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್‌ಗೆ ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಕಚೇರಿ. ಅಮಿತ್ ಸಾ, ಗೃಹ ಇಲಾಖೆಗೂ ಟ್ಯಾಗ್ ಮಾಡಲಾಗಿದೆ. ಆದಷ್ಟು ಶೀಘ್ರವಾಗಿ ಕೇರಳ- ಕರ್ನಾಟಕ ಗಡಿಯನ್ನು ಓಪನ್ ಮಾಡಬೇಕೆಂದು ಆಗ್ರಹಿಸಲಾಗಿದೆ. 

Aug 26, 2020, 4:39 PM IST

ಬೆಂಗಳೂರು (ಆ. 26): ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಬಂಧಿಸಿದ್ದ ಅಂತರ್‌ರಾಜ್ಯ ಪ್ರಯಾಣಕ್ಕೆ ಈಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕೇಂದ್ರದ ಆದೇಶಕ್ಕೆ ಕೇರಳ ಕೇರ್ ಮಾಡುತ್ತಿಲ್ಲ. ಮಂಗಳೂರು- ಕೇರಳ ಗಡಿ ಪಣಪ್ಪಾಡಿ ಪಂಚಾಯತ್ ನಲ್ಲಿ ಕೇರಳ ಪೊಲೀಸರು ಕ್ಯಾತೆ ತೆಗೆದಿದ್ದರು. ಇದರಿದ ಗಡಿ ನಾಡ ಕನ್ನಡಿಗರಿಗೆ ತೊಂದರೆಯಾಗಿತ್ತು. ಅದೇ ರೀತಿ ಕೊಡಗು ಗಡಿಯಲ್ಲಿಯೂ ಕ್ಯಾತೆ ತೆಗೆದಿತ್ತು ಕೇರಳ. ಅಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಪ್ರಯಾಣಕ್ಕೆ ಸಮಯವನ್ನು ನಿಗದಿಪಡಿಸಿತ್ತು. 