ಕರಾವಳಿ ಜಿಲ್ಲೆಗಳ ಮೇಲೆ ನಿಸರ್ಗ ಚಂಡಮಾರುತದ ಎಫೆಕ್ಟ್‌: ಸಮುದ್ರದಲ್ಲಿ ಮುಳುಗಿದ ಬೋಟ್‌

ಭಾರೀ ಗಾತ್ರದ ಅಲೆಗಳಿಂದಾಗಿ ಸಮುದ್ರದಲ್ಲಿ ಮುಳುಗಿದ ಬೋಟ್‌ಗಳು| ದುರ್ಗಾ, ಹನುಮ ಹೆಸರಿನ ಯಾಂತ್ರಿಕ ದೋಣಿಗಳು ಮುಳುಗಡೆ| ಬೋಟ್‌ಗಳಲ್ಲಿದ್ದ 8 ಮೀನುಗಾರರ ರಕ್ಷಣೆ| ಕರಾವಳಿಯಾದ್ಯಂತ ಹೆಚ್ಚಾದ ಕಡಲಿನ ಅಬ್ಬರ| 

First Published Jun 3, 2020, 3:56 PM IST | Last Updated Jun 3, 2020, 3:56 PM IST

ಕಾರವಾರ(ಜೂ.03): ನಿಸರ್ಗ ಚಂಡಮಾರುತದಿಂದ ಉಂಟಾದ ಭಾರೀ ಗಾತ್ರದ ಅಲೆಗಳಿಂದಾಗಿ ಸಮುದ್ರದಲ್ಲಿ ಬೋಟ್‌ಗಳು ಮುಳುಗಿದ ಘಟನೆ ಗೋವಾದಲ್ಲಿ ನಡೆದಿದೆ. ದುರ್ಗಾ, ಹನುಮ ಹೆಸರಿನ ಯಾಂತ್ರಿಕ ದೋಣಿಗಳು ಮುಳುಗಡೆಯಾಗಿವೆ. ಈ ವೇಳೆ ಬೋಟ್‌ಗಳಲ್ಲಿದ್ದ 8 ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. 

ಕೊರೊನಾ ಭೀತಿ ನಡುವೆಯೇ ಶಾಲೆಗಳನ್ನು ಆರಂಭಿಸಬೇಕಾ? ಚಿತ್ರನಟ ಪ್ರೇಮ್ ಹೇಳುವುದಿದು..!

ನಿಸರ್ಗ ಚಂಡಮಾರುತದಿಂದ ಕರವಾಳಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕರಾವಳಿಯಾದ್ಯಂತ ಕಡಲಿನ ಅಬ್ಬರ ಹೆಚ್ಚಾಗಿದೆ. ಭಾರೀ ಪ್ರಮಾಣದಲ್ಲಿ ಏಳುತ್ತಿರುವ ಅಲೆಗಳಿಂದಾಗಿ ಮೀನುಗಾರರು ಕಂಗೆಟ್ಟಿದ್ದಾರೆ.