ಸಾರಿಗೆ ನೌಕರರ ಪ್ರತಿಭಟನೆ: ಸಂಧಾನಕ್ಕೆ ಮುಂದಾದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ
ಸಾರಿಗೆ ನೌಕರರ ಮುಷ್ಕರ ಇಂದು ಕೂಡಾ ಮುಂದುವರೆದಿದೆ. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸಂಧಾನಕ್ಕೆ ಮುಂದಾಗಿದ್ದಾರೆ.
ಬೆಂಗಳೂರು (ಡಿ. 12): ಸಾರಿಗೆ ನೌಕರರ ಮುಷ್ಕರ ಇಂದು ಕೂಡಾ ಮುಂದುವರೆದಿದೆ. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸಂಧಾನಕ್ಕೆ ಮುಂದಾಗಿದ್ದಾರೆ. 'ನಿಮ್ಮ ಬೇಡಿಕೆ ಬಗ್ಗೆ ಮುಖ್ಯಮಂತ್ರಿಯವರ ಜೊತೆ, ಮುಖಂಡರು, ಸಚಿವರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ನೌಕರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಎಲ್ಲರೂ ಶಾಂತಿಯುವತವಾಗಿ ವರ್ತಿಸಬೇಕು' ಎಂದು ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ.