Asianet Suvarna News Asianet Suvarna News

ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಕೋಡಿಹಳ್ಳಿ ಆಕ್ರೋಶ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಪ್ರತಿಭಟನೆ ಕುರಿತು ಇಂದು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಸಭೆ ಕರೆದಿದ್ದರು. ಆದರೆ ಸಭೆಗೆ ಪ್ರತಿಭಟನಾಕಾರರನ್ನು ಆಹ್ವಾನಿಸಿಲ್ಲ. ಯೂನಿಯನ್ ಲೀಡರ್ಸ್‌ಗಳನ್ನು ಕರೆದು ಮಾತನಾಡಿದ್ದಾರೆ. 

First Published Dec 11, 2020, 3:54 PM IST | Last Updated Dec 11, 2020, 3:54 PM IST

ಬೆಂಗಳೂರು (ಡಿ. 11): ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಪ್ರತಿಭಟನೆ ಕುರಿತು ಇಂದು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಸಭೆ ಕರೆದಿದ್ದರು. ಆದರೆ ಸಭೆಗೆ ಪ್ರತಿಭಟನಾಕಾರರನ್ನು ಆಹ್ವಾನಿಸಿಲ್ಲ. ಯೂನಿಯನ್ ಲೀಡರ್ಸ್‌ಗಳನ್ನು ಕರೆದು ಮಾತನಾಡಿದ್ದಾರೆ. 

ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ, ಪ್ರತಿಭಟನೆ ಕೈ ಬಿಡಿ: ಸಾರಿಗೆ ಸಚಿವರಿಂದ ಮನವಿ

ಸವದಿಯವರ ಈ ನಡೆಗೆ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ ಕಾರಿದ್ದಾರೆ. ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅತೀ ಬುದ್ದಿವಂತಿಕೆ ತೋರಿಸುತ್ತಿದ್ಧಾರೆ. ಬೇಡಿಕೆ ಈಡೇರುವವರೆಗೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ' ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ಧಾರೆ.
 

Video Top Stories