
ಸಾರಿಗೆ ಸಮರ ಸುಖಾಂತ್ಯ; ರಸ್ತೆಗಿಳಿದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ;
ಸಾರಿಗೆ ನೌಕರರು ಹಾಗೂ ಸರ್ಕರದ ನಡುವಿನ ಹಗ್ಗ ಜಗ್ಗಾಟ ಮುಕ್ತಾಯಗೊಂಡಿದೆ. ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಲಿಖಿತ ಭರವಸೆ ನೀಡಿದೆ.
ಬೆಂಗಳೂರು (ಡಿ. 15): ಸಾರಿಗೆ ನೌಕರರು ಹಾಗೂ ಸರ್ಕರದ ನಡುವಿನ ಹಗ್ಗ ಜಗ್ಗಾಟ ಮುಕ್ತಾಯಗೊಂಡಿದೆ. ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಲಿಖಿತ ಭರವಸೆ ನೀಡಿದೆ. 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿ ಹಾಲಿ ಭರವಸೆಗಳ ಅನುಷ್ಠಾನಕ್ಕೆ ಸಾರಿಗೆ ನೌಕರರ ಒಕ್ಕೂಟ 3 ತಿಂಗಳ ಗಡುವು ವಿಧಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಾರಿಗೆ ಸಮರ ಅಂತ್ಯ, ಕರ್ತವ್ಯಕ್ಕೆ ಹಾಜರಾದ ನೌಕರರು, ನಿರಾಳರಾದ ಪ್ರಯಾಣಿಕರು
ಸರ್ಕಾರ ಭರವಸೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿವೆ. ಇಂದಿನಿಂದ ಎಂದಿನಂತೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿದಿವೆ. ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.