ಬಿಜೆಪಿಯಲ್ಲಿ ರೆಬೆಲ್ ನಾಯಕರ ಗುದ್ದಾಟ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಜಟಾಪಟಿ!
ಬಿಜೆಪಿ ಬಣ ಬಡಿದಾಟ, ದೆಹಲಿಯಲ್ಲಿ ರೆಬೆಲ್ ಟೀಂ ಭೇಟಿ,ಬಸನಗೌಡ ಪಾಟೀಲ್ ಯತ್ನಾಳ್ ಪರ ಸಂಸದರ ಬ್ಯಾಟಿಂಗ್, 2.5 ವರ್ಷಕ್ಕೆ ಸಿಎಂ ಬದಲು, ಸಂದರ್ಶನದಲ್ಲಿ ಗುಟ್ಟು ಬಿಚ್ಚಿಟ್ರಾ ಡಿಕೆಶಿ?ಮಹಾರಾಷ್ಟ್ರದಲ್ಲಿ ಸಿಎಂ ಕಸರತ್ತು ಅಂತಿಮ, ಕುತೂಹಲ ಬಾಕಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಬಿಜೆಪಿ ಶಿಸ್ತುಸಮಿತಿ ನೀಡಿರುವ ನೋಟಿಸ್‌ಗೆ ಉತ್ತರಿಸಲು ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ನಾಳೆ ಯತ್ನಾಳ್ ಶಿಸ್ತು ಸಮಿತಿ ಮುಂದೆ ವಿವರಣೆ ನೀಡಲು ಸಜ್ಜಾಗಿದ್ದಾರೆ.ಇದರ ನಡುವೆ ಬಿವೈ ವಿಜಯೇಂದ್ರ ಹಾಗೂ ತಂಡದ ವಿರುದ್ದ ಬಂಡಾಯ ತಂಡ ಹರಿಹಾಯ್ದಿದೆ. ಬಿಜೆಪಿಯಲ್ಲಿ ಬಂಡಾಯ ಜೋರಾಗಿದ್ದರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಜಟಾಪಟಿ ಆರಂಭಗೊಂಡಿದೆ. ಈ ಕುರಿತು ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.