Asianet Suvarna News Asianet Suvarna News

ಆನೆಗೂ ಬಂತಾ ಆಧಾರ್ ಕಾರ್ಡ್? ವಿವಾದಕ್ಕೆ ಗುರಿಯಾದ ಕೇರಳ ವ್ಯಕ್ತಿಗೆ ಕರ್ನಾಟಕದ ಪರಿಹಾರ!

ಕಾಡಾನೆ ದಾಳಿಗೆ ಬಲಿಯಾದ ಕೇರಳ ವ್ಯಕ್ತಿಗೆ ಕರ್ನಾಟಕದಿಂದ ಪರಿಹಾರ ವಿವಾದ, ಸಮರಕ್ಕೂ ಮುನ್ನ ಶಸ್ತ್ರ ತ್ಯಾಗ ಮಾಡಿತಾ ಇಂಡಿಯಾ ಮೈತ್ರಿ?ಶಾಲೆ ಘೋಷವಾಕ್ಯ ಮತ್ತೆ ಬದಲು, ಹಳೇ ವಾಕ್ಯಕ್ಕೆ ಹೊರಳಿದ ಸರ್ಕಾರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಕಾಡಾನೆ ದಾಳಿಗೆ ಕೇರಳ ವಯನಾಡಿನ ವ್ಯಕ್ತಿ ಮೃತಪಟ್ಟ ಬಳಿಕ ನೀಡಿದ ಪರಿಹಾರ ಹಲವು ವಿವಾದಕ್ಕೆ ಕಾರಣವಾಗಿದೆ. ಕೇರಳ ಸರ್ಕಾರ 10 ಲಕ್ಷ ರೂಪಾಯಿ ಹಾಗೂ ಕುಟುಂಬದ ಸದಸ್ಯರಿಗೆ ಒಂದು ಸರ್ಕಾರಿ ಉದ್ಯೋಗ ಘೋಷಿಸಿದೆ. ಆದರೆ ವಯನಾಡು ಸಂಸದ ರಾಹುಲ್ ಗಾಂಧಿ ಕರ್ನಾಟಕ ಸರ್ಕಾರಕ್ಕೆ ನೀಡಿದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಕೇರಳ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಎರಡೇ ದಿನದಲ್ಲಿ ಪರಿಹಾರ ಕೇರಳದ ಮೃತ ವ್ಯಕ್ತಿ ಕುಟುಂಬಕ್ಕೆ ತಲುಪಿದೆ. ಕರ್ನಾಟಕದ ಆನೆಯಿಂದ ಕೇರಳ ವ್ಯಕ್ತಿ ಬಲಿಯಾಗಿದ್ದಾರೆ ಎಂದು ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡು ಹಳ್ಳಕ್ಕೆ ಬಿದ್ದಿದೆ. ಬಿಜೆಪಿ ಈ ಪರಿಹಾರ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕ ಸರ್ಕಾರದ ನಡೆಯನ್ನು ಹಲವರು ಟೀಕಿಸಿದ್ದಾರೆ.
 

Video Top Stories