
ಹಾವನೂರು ವರದಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು: ಅರವಿಂದ್ ಬೆಲ್ಲದ್
ಪಂಚಮಸಾಲಿ ಸಮುದಾಯದ 2 A ಮೀಸಲಾತಿ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಾವನೂರು ವರದಿ ಮೂಲಕ ವೀರಶೈವ ಲಿಂಗಾಯತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮೀಸಲಾತಿ ಬೇಕೆಂದು ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಒತ್ತಾಯಪಡಿಸಿದ್ದಾರೆ.
ಬೆಂಗಳೂರು (ಫೆ. 21): ಪಂಚಮಸಾಲಿ ಸಮುದಾಯದ 2 A ಮೀಸಲಾತಿ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಾವನೂರು ವರದಿ ಮೂಲಕ ವೀರಶೈವ ಲಿಂಗಾಯತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮೀಸಲಾತಿ ಬೇಕೆಂದು ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಒತ್ತಾಯಪಡಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
IMA ಪ್ರಕರಣದಲ್ಲಿ ಇಬ್ಬರು ಮಾಜಿ ಸಿಎಂ ಹೆಸರು; ವಂಚನೆ ಪ್ರಕರಣದಲ್ಲಿ ಚುನಾವಣೆ ಘಾಟು!
ಈ ಹೋರಾಟ ಕೇವಲ ಪಂಚಮಸಾಲಿಗಳಿಗೆ ಮಾತ್ರ ಸೀಮಿತವಲ್ಲ. ಇಡೀ ವೀರಶೈವ ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮದು ಹಿಂದುಳಿದ ಸಮಾಜ. ನಮ್ಮ ಸಮುದಾಯದ ಯುವಕರಿಗೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮೀಸಲಾತಿ ದೊರೆಯಲು ಅನುಕೂಲವಾಗುವಂತೆ ಒಬಿಸಿಯಲ್ಲಿ ಹೆಚ್ಚು ಮೀಸಲಾತಿ ಇರುವ 2 ಎ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಪಡಿಸಿದ್ದಾರೆ.