
ತಮ್ಮದೇ ಸರ್ಕಾರದ ಗೃಹ ಇಲಾಖೆ ಮೇಲೆ ಬಿಜೆಪಿ ಅನುಮಾನ?
ಜೆಜೆ ನಗರ ಚಂದ್ರು ಕೊಲೆ ಪ್ರಕರಣ
ಕೊಲೆ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಕಮೀಷನರ್
ಪೊಲೀಸ್ ವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸಿದ ಬಿಜೆಪಿ
ಬೆಂಗಳೂರು (ಏ.9): ಜೆಜೆ ನಗರ ಚಂದ್ರು (JJ Nagar Chandru) ಕೊಲೆ ವಿಚಾರದಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ (Bengaluru Police commissioner Kamal Pant ) ಸುಳ್ಳು ಹೇಳಿದ್ರಾ? ಅಂಥದ್ದೊಂದು ಅನುಮಾನ ಬಿಜೆಪಿ ನಾಯಕರಲ್ಲಿ (BJP Leaders) ವ್ಯಕ್ತವಾಗಿದೆ. ತಮ್ಮದೇ ಸರ್ಕಾರದ ಪೊಲೀಸ್ ವ್ಯವಸ್ಥೆ ಮೇಲೆ ಬಿಜೆಪಿ ಸರ್ಕಾರ ಈ ಅನುಮಾನ ವ್ಯಕ್ತಪಡಿಸಿದೆ.
ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಹೇಳಿದ ವಿಚಾರಗಳಲ್ಲಿ ಸತ್ಯವಿದೆ. ಬೆಂಗಳೂರು ಕಮೀಷನರ್ ಕಮಲ್ ಪಂತ್ ಅವರೇ ಸುಳ್ಳಿ ಹೇಳಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗೃಹ ಸಚಿವರು ಮಾತಿನಲ್ಲಿ ಎಡವಿದ್ದಕ್ಕೆ, ಇದರ ತಪ್ಪನ್ನು ಪೊಲೀಸ್ ಕಮೀಷನರ್ ಮೇಲೆ ಹೊರಿಸುವ ಪ್ರಯತ್ನಗಳು ನಡೆಯುತ್ತಿವೆ.
ಚಂದ್ರು ಮರ್ಡರ್ ಕೇಸ್: ಬಾಲ್ಯ ಸ್ನೇಹಿತನ ನೋವಿನ ಮಾತು
ಇನ್ನು ಪೊಲೀಸ್ ಕಮೀಷನರ್ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಚಂದ್ರ ಕೊಲೆ ವಿಚಾರವನ್ನು ನಿಭಾಯಿಸುವಲ್ಲಿ ಪೊಲೀಸ್ ವಿಫಲವಾಗಿದೆ. ಇಡೀ ಪ್ರಕರಣದ ದಿಕ್ಕು ತಪ್ಪಿಸಿರುವ ಕಮಲ್ ಪಂತ್ ಎತ್ತಂಗಡಿಯಾಗುವ ಮುನ್ಸೂಚನೆಯೂ ಸಿಕ್ಕಿದೆ.