Asianet Suvarna News Asianet Suvarna News

ರಾಜಾಹುಲಿ ಬೇಟೆಗೆ ಬಿಜೆಪಿ ತ್ರಿಮೂರ್ತಿಗಳ ಸೈಲೆಂಟ್ ಸ್ಕೆಚ್..!

ಭೋಜನಕೂಟದ ನೆಪದಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಬೆಳಗಾವಿಯ ಹಿರಿಯ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕರು ನಡೆಸಿದ ಸಭೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರಿಗೆ, ಪಕ್ಷದ ವರಿಷ್ಠರಿಗೆ ತಲೆ ನೋವು ತಂದಿದೆ. ಕೊರೋನಾ ಸಂಕಷ್ಟದಿಂದ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಬಿಎಸ್‌ವೈ ಬ್ಯುಸಿಯಾಗಿದ್ದರೆ ಇನ್ನೊಂದೆಡೆ ಅತೃಪ್ತರ ಭಿನ್ನಮತವನ್ನು ಶಮನಗೊಳಿಸುವ ಸವಾಲು ಎದುರಾಗಿದೆ. 

First Published May 30, 2020, 6:06 PM IST | Last Updated May 30, 2020, 6:06 PM IST

ಭೋಜನಕೂಟದ ನೆಪದಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಬೆಳಗಾವಿಯ ಹಿರಿಯ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕರು ನಡೆಸಿದ ಸಭೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರಿಗೆ, ಪಕ್ಷದ ವರಿಷ್ಠರಿಗೆ ತಲೆ ನೋವು ತಂದಿದೆ. 

ಕೊರೋನಾ ಸಂಕಷ್ಟದಿಂದ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಬಿಎಸ್‌ವೈ ಬ್ಯುಸಿಯಾಗಿದ್ದರೆ ಇನ್ನೊಂದೆಡೆ ಅತೃಪ್ತರ ಭಿನ್ನಮತವನ್ನು ಶಮನಗೊಳಿಸುವ ಸವಾಲು ಎದುರಾಗಿದೆ. 
ಮುಂದಿನ ದಿನಗಳಲ್ಲಿ ಹಂತಹಂತವಾಗಿ ಶಾಸಕರನ್ನು ವೈಯಕ್ತಿಕವಾಗಿ ಕರೆದು ಅವರ ಅಹವಾಲುಗಳನ್ನು ಆಲಿಸುವುದರ ಜೊತೆಗೆ ಸಾಧ್ಯವಾದಷ್ಟು ಅವರವರ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸಿನ ಲಭ್ಯತೆ ಆಧಾರದ ಮೇಲೆ ಅನುದಾನ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

27 ಬಿಜೆಪಿ ಬಂಡಾಯ ಶಾಸಕರಿಗೆ ಶಾಕ್ ಕೊಟ್ಟ ಅಮಿತ್ ಶಾ..!

ಇದ್ದಕ್ಕಿದ್ದಂತೆ ಕೇಸರಿ ಪಾಳಯದಲ್ಲಿ ಭಿನ್ನಮತ ಭುಗಿಲೇಳಲು ಕಾರಣವೇನು? ಈ ಭಿನ್ನಮತವನ್ನು ಬಿಎಸ್‌ವೈ ಹೇಗೆ ನಿಭಾಯಿಸುತ್ತಾರೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ..!

Video Top Stories