Asianet Suvarna News Asianet Suvarna News

ಬೈ ಎಲೆಕ್ಷನ್ ಸೋಲಿನ ಬಳಿಕ ಬಿಜೆಪಿ ಅಲರ್ಟ್, ಇಂದು ಪದಾಧಿಕಾರಿಗಳ ಸಭೆ

Nov 9, 2021, 12:25 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 09):  ಪಕ್ಷದ ಸಂಘಟನೆ ಬಲಗೊಳಿಸುವುದೂ ಸೇರಿದಂತೆ ಮುಂಬರುವ ವಿವಿಧ ಚನಾವಣೆಗಳಿಗೆ ಸಿದ್ಧತೆ ಆರಂಭಿಸುವ ಕುರಿತಂತೆ ಇಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ.

ಹಾನಗಲ್ ಬೈ ಎಲೆಕ್ಷನ್ ಸೋಲಿನ ನಂತರ ಶಾಸಕರಿಂದ ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮ

 ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಮುಂಬರುವ ಜನವರಿಯಲ್ಲಿ ವಿಧಾನಪರಿಷತ್ತಿನ 25 ಕ್ಷೇತ್ರಗಳ ಚುನಾವಣೆ ಎದುರಾಗಲಿದೆ. ಜೊತೆಗೆ ಬಿಬಿಎಂಪಿ ಚುನಾವಣೆ ನಡೆಸುವ ಕುರಿತಂತೆ ಶೀಘ್ರದಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರುವ ನಿರೀಕ್ಷೆಯಿದೆ. ಜತೆಗೆ ಪಕ್ಷ ಸಂಘಟನೆ ಉದ್ದೇಶದಿಂದ ಪಕ್ಷದ ನಾಲ್ಕು ತಂಡಗಳು ಇದೇ ತಿಂಗಳ 19ರಿಂದ ರಾಜ್ಯ ಪ್ರವಾಸ ಕೈಗೊಂಡು ‘ಜನಸ್ವರಾಜ್‌ ಸಮಾವೇಶ’ಗಳನ್ನು ನಡೆಸಲಿದೆ. ಈ ಸಮಾವೇಶವನ್ನು ಯಶಸ್ವಿಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. 

 

Video Top Stories