Asianet Suvarna News Asianet Suvarna News

Bitcoin Scam| ಶ್ರೀಕಿ ಜೊತೆ ದರ್ಶನ್ ನಂಟು: ಪುತ್ರನ ಬಗ್ಗೆ ಕೈ ನಾಯಕ ರುದ್ರಪ್ಪ ಲಮಾಣಿ ಹೇಳಿದ್ದಿಷ್ಟು!

Nov 11, 2021, 12:40 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ನ.11):  ಕರ್ನಾಟಕ ಬಿಟ್‌ಕಾಯಿನ್ ಹಗರಣ ಸಂಬಂಧ ದಿನಗಳೆದಂತೆ ಪ್ರಮುಖ ವಿಚಾರಗಳು ಬಯಲಾಗಲಾರಮಭಿಸಿವೆ. ಹೌದು ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್‌. ಎ. ಹ್ಯಾರಿಸ್‌ರವರ ಇಬ್ಬರೂ ಪುತ್ರರೂ ಶ್ರೀಕಿಯ ಜೊತೆ ಆತ್ಮೀಯರಾಗಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.

ಓರ್ವ ಪುತ್ರ ಕ್ರಿಮಿನಲ್ ಶ್ರೀಕಿ ಜೊತೆ ಆರೋಪಿಯಾಗಿದ್ದಾನೆ. ಇನ್ನು ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ಸಚಿವ ತರುದ್ರಪ್ಪ ಲಮಾಣಿ ಮಗ ಕೂಡಾ ದರ್ಶನ್ ಕೂಡಾ ಶ್ರೀಕಿಗೆ ಆತ್ಮೀಯನಾಗಿದ್ದು, ಆತನೂ ಡ್ರಗ್ಸ್ ಕೇಸ್‌ನಲ್ಲಿ ಸಹ ಆರೋಪಿಯಾಗಿದ್ದಾನೆ. 

ಇನ್ನು ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ತಮ್ಮ ಮಗನ ಬಗ್ಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿದ್ದಾರೆ. ಮಗನಿಗೆ ಡ್ರಗ್ಸ್ ಕೇಸ್‌ನಲ್ಲಿ ಈಗಾಗಲೇ ಜಾಮೀನು ಸಿಕ್ಕಿದೆ, ಇದಕ್ಕೂ ಬಿಟ್ ಕಾಯಿನ್‌ ಕೇಸ್‌ಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಇಷ್ಟೇ ಅಲ್ಲದೇ ಲಮಾಣಿ ತಮ್ಮ ಮಗನ ಬಗ್ಗೆ ಕೊಟ್ಟ ಮತ್ತಷ್ಟು ಸ್ಪಷ್ಟನೆ ಇಲ್ಲಿದೆ ನೋಡಿ.