Bitcoin Scam: ಬಿಟ್‌ಕಾಯಿನ್ ಕೇಸ್ ಪತ್ತೆ ಹಚ್ಚಿದ್ದೇ ನಾವು, ಸುರ್ಜೆವಾಲಾಗೆ ಬಿಜೆಪಿ ಉತ್ತರ!

ಬಿಟ್‌ಕಾಯಿನ್ ಹಗರಣದ ಬಗ್ಗೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ 6 ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದರು.  ಕರ್ನಾಟಕದಲ್ಲಿ ನಡೆದ ಬಹುಕೋಟಿ ಬಿಟ್‌ ಕಾಯಿನ್‌ ಹಗರಣ ಮುಚ್ಚಿಹಾಕುವ ಯತ್ನದ ಹಿಂದಿರುವ ಸೂತ್ರಧಾರಿಗಳು ಯಾರು? ಎಂದು ಪ್ರಶ್ನಿಸಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ನ. 13): ಬಿಟ್‌ಕಾಯಿನ್ ಹಗರಣದ (Bitcoin Scam) ಬಗ್ಗೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ (Surjewala) 6 ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದರು. ಕರ್ನಾಟಕದಲ್ಲಿ ನಡೆದ ಬಹುಕೋಟಿ ಬಿಟ್‌ ಕಾಯಿನ್‌ ಹಗರಣ ಮುಚ್ಚಿಹಾಕುವ ಯತ್ನದ ಹಿಂದಿರುವ ಸೂತ್ರಧಾರಿಗಳು ಯಾರು? ಎಂದು ಪ್ರಶ್ನಿಸಿದ್ದಾರೆ. ಸುರ್ಜೆವಾಲಾ ಅವರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಸುದ್ದಿಗೋಷ್ಟಿ ನಡೆಸು ಉತ್ತರ ನೀಡಿದ್ದಾರೆ. 

Bitcoin Scam : ಸುರ್ಜೆವಾಲಾ ಆರೋಪಕ್ಕೆ ಸಿಎಂ ಬೊಮ್ಮಾಯಿ ಉತ್ತರ

'ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಪೊಲೀಸರು ಬಿಟ್ ಕಾಯಿನ್ ಕಂಪನಿಗಳಿಗೆ ಪತ್ರ ಬರೆದಿದ್ದಾರೆ. ಇದುವರೆಗೂ ಯಾವ ಕಂಪನಿಗಳೂ ಉತ್ತರ ಕೊಟ್ಟಿಲ್ಲ. ಎಲ್ಲಿಯೂ ದೂರು ನೀಡಿಲ್ಲ. ದಾಖಲೆಗಳಿಲ್ಲದೇ ಆರೋಪ ಮಾಡುವುದು ಕಾಂಗ್ರೆಸ್‌ಗೆ ಚಾಳಿಯಾಗಿದೆ. ಬಿಟ್‌ಕಾಯಿನ್ 2016 ರಿಂದಲೇ ಕೇಸ್ ಇದೆ ಅಂತಾರೆ. ಅವರ ಸರ್ಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸುರ್ಜೆವಾಲಾ ಕೇಳಲಿ.? ಈಗ ಕೇಸ್ ದೊಡ್ಡದಾದಾಗ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ' ಎಂದಿದ್ದಾರೆ. 

Related Video